ಗರ್ಭಗುಡಿ ಸುತ್ತ ಮೊಬೈಲ್ ನಿಶಬ್ಧವಾಗಿಡಿ ಸೂಚನೆ ಯಾರಿಗೆ

ಜಿಲ್ಲೆಯ ಪ್ರಸಿದ್ಧ ದೇವಿ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಸರಕಾರಿ ರಜಾ ದಿನವಾದುದರಿಂದ ಎಲ್ಲಿ ಕಂಡರೂ ಜನವೋ ಜನ ಕಷ್ಟಪಟ್ಟು ದೇವಸ್ಥಾನ ಪ್ರವೇಶಿಸಿದೆ ಅಲ್ಲಿನ ಸರತಿ ಸಾಲು ಮುಂದಕ್ಕೆ ಹೋಗುತ್ತಿಲ್ಲ ಕಾರಣ ಒಳಪೌಳಿಯಲ್ಲಿ ಕೂತು ಕಾಲ ಕೆಳಬಿಟ್ಟು ಮೊಬೈಲಿನಲ್ಲಿ ಹರಟುವವರು ಕೆಲವರಾದರೆ ಪ್ರದಕ್ಷಿಣೆ ಹಾಕುತ್ತಾ ಮೊಬೈಲಿನಲ್ಲಿ ಬೊಬ್ಬೆ ಹೊಡೆಯುವವರು ಹೆಚ್ಚಿನವರು ಗರ್ಭಗುಡಿ ಸುತ್ತ ಮೊಬೈಲ್ ನಿಶಬ್ಧವಾಗಿಡಿ ಎಂದು ಅಲ್ಲಲ್ಲಿ ಫಲಕ ಹಾಕಿದ್ದರೂ ಇತರ ಭಕ್ತಾದಿಗಳಿಗೆ ತೊಂದರೆ ಆಗುತ್ತದೆ ಎಂದು ಗೊತ್ತಿದ್ದರೂ ಅವರಿಗೂ ಅದರ ಗೊಡವೆಯಿಲ್ಲ ಕೆಲ ನಿಮಿಷ ಮಟ್ಟಿಗಾದರೂ ಮೊಬೈಲಿಗೆ ರೆಸ್ಟ್ ಕೊಡಬಾರದೇಕೆ

  • ಸುಜಯ್ ಶೆಟ್ಟಿ  ಬಡಗಬೆಟ್ಟು ಉಡುಪಿ

LEAVE A REPLY