ಯುವಕರನ್ನು ತಡೆದು ಮೊಬೈಲ್ ಅಪಹರಣ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಚೆಂಬರಿಕ ಚಂದ್ರಗಿರಿ ಪಿ ಎಂ ಹೌಸ್ ನಿವಾಸಿ ಮೊಹಮ್ಮದ್ ರಿಯಾಸ್ (32) ಅವರನ್ನು ತಡೆದು ಅವರ ಕೈಯಲ್ಲಿದ್ದ 7000 ರೂ ನಗದು ಮತ್ತು ಎಟಿಎಂ ಕಾರ್ಡ್ ಒಳಗೊಂಡ ಪರ್ಸ್, ಸ್ನೇಹಿತ ಯೂಸುಫನ 1000 ರೂ, 2 ಮೊಬೈಲ್, ಇಲೆಕ್ಷನ್ ಐಡಿ ಕಾರ್ಡನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿ ಐವರ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಆಲಂಪಾಡಿ ಮಸೀದಿ ಬಳಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಸೂದ್, ಶುಹೈಬ್, ರಿಯಾಸ್, ಶಮೀಮ್ ಮತ್ತು ಹಸೀಬ್ ವಿರುದ್ಧ ಕೇಸು ದಾಖಲಿಸಲಾಗಿದೆ.