ಮೊಬೈಲ್ ಕಂಪನಿಗಳ ಲೂಟಿ

ಮೊಬೈಲ್ ಸಂಸ್ಥೆಗಳು ವಿವಿಧ ಆಫರ್ ಕೊಟ್ಟು ಗ್ರಾಹಕರಿಗೆ ಉಡುಗೊರೆಗಳನ್ನು ಕೊಡುತ್ತಿದ್ದೇವೆ ಎಂದು ಹೇಳುತ್ತಿವೆ. ವಾಸ್ತವದಲ್ಲಿ ಇವುಗಳು ಮೊಬೈಲ್ ಕರೆ ಮತ್ತು ಡಾಟಾದ ಹುಚ್ಚು ಹಿಡಿಸಿ ಜನರನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ ಎನ್ನುವುದಕ್ಕೆ ಯಾವುದೇ ಸಂದೇಹ ಬೇಡ. ಆರಾಮವಾಗಿ ತಿಂಗಳಿಗೆ ಒಂದಷ್ಟು ರೂಪಾಯಿ ಮೊಬೈಲಿಗೆ ಮೀಸಲಾಗಿಟ್ಟು ಅದನ್ನು ಹಿತಮಿತವಾಗಿ ಬಳಸುತ್ತಿದ್ದವರು ಈಗ ದಿನಕ್ಕೆ ಹತ್ತು ರೂಪಾಯಿ ಖರ್ಚು ಮಾಡಿ ಇವರ ಮುನ್ನೂರು ರೂಪಾಯಿ ಆಫರಿಗೆ ಜೋತು ಬೀಳುವಂತಾಗಿದೆ. ತಿಂಗಳಿಗೆ ಮೂವತ್ತು ಅಂದರೆ ದಿನಕ್ಕೆ ಹತ್ತು ಎಂಬುದು ಮೂರ್ಖ ಗ್ರಾಹಕರು ಮರೆಯದೇ ಇರುವವರೆಗೆ ಮೊಬೈಲ್ ಕಂಪೆನಿಗಳ ಲೂಟಿ ಮುಂದುವರಿಯುತ್ತದೆ

  • ರಘು  ಉರ್ವ ಮಂಗಳೂರು