ಮಹಿಳೆ ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿ ಪರ ಪೊಲೀಸರಲ್ಲಿ ಶಾಸಕನ ವಕಾಲತ್ತು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೂಲ್ಕಿ ಸಮೀಪದ ಕಾರ್ನಾಡ್ ಎಂಬಲ್ಲಿ ಬಹುಮಹಡಿ ಕಟ್ಟಡಕ್ಕೆ ನುಗ್ಗಿ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿ ಗೂಸಾ ತಿಂದ ಸುರತ್ಕಲ್ ಸಮೀಪದ ಬೈಕಂಪಾಡಿ ಅಂಗರಗುಂಡಿ ನಿವಾಸಿ ಮಹಮ್ಮದ್ ರಿಫಾಯ್ ಯಾನೆ ಆಲಿಯಾಸ್ ಭಯ್ಯಾ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿ ಕುಳ್ಳಿರಿಸಿದಾಗ ಆರೋಪಿ ಪರ ವಕಾಲತ್ತು ವಹಿಸಿದ ಅದೇ ಸಮಾಜದ ಶಾಸಕ ಹಾಗೂ ಮಸೀದಿ ಅಧ್ಯಕ್ಷರೊಬ್ಬರು ಠಾಣೆಗೆ ಫೋನ್ ಮಾಡಿದ ಬಗ್ಗೆ ತಡವಾಗಿ ತಿಳಿದುಬಂದಿದೆ. ಆದರೆ ಮುಲ್ಕಿ ಠಾಣಾ ಇನ್ಸಪೆಕ್ಟರ್ ಶಾಸಕರನ್ನು ಕ್ಯಾರ್ ಮಾಡದೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದ ಬಗ್ಗೆ ಸಾರ್ವತ್ರಿಕ ಪ್ರಶಂಸೆಗೆ ಕಾರಣವಾಗಿದೆ.

ಆರೋಪಿ ಮಹಮ್ಮದ್ ರಿಫಾಯ್ ಕಿನ್ನಿಗೋಳಿ ಪಕ್ಷಿಕೆರೆ, ಗುತ್ತಕಾಡು ಪ್ರದೇಶದಲ್ಲಿ ಮರಳು ಮಾಫಿಯಾ ಸೇರಿದಂತೆ ಡಾನ್.ಗಳೊದಿಗೆ ನೇರ ಸಂಪರ್ಕದಲ್ಲಿದ್ದು ಮರಳು ಮಾಫಿಯಾದ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸದಂತೆ ದೂರವಾಣಿ ಕರೆ ಹೋಗಿತ್ತು

ಎಂದು ತಿಳಿದುಬಂದಿದೆ. ಆರೋಪಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಮೂರು ಮಕ್ಕಳ ತಂದೆಯಾಗಿರುವ ಈತ ಗಾಂಜಾ, ಅನೇಕ ಕಡೆ ಮಹಿಳೆಯರಿಗೆ ಕಿರುಕುಳ ಸಹಿತ ದಂಧೆಗಳನ್ನು ಸಲೀಸಾಗಿ ನಡೆಸುತ್ತಿದ್ದ ಎನ್ನಲಾಗಿದೆ.  ಆರೋಪಿ ಮಹಮ್ಮದ್ ರಿಫಾಯ್ ವಿರುದ್ಧ ಮೂಡಬಿದ್ರೆ ಹಾಗೂ ಪಣಂಬೂರಿನಲ್ಲಿ ನಡೆದ ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಹಾಗೂ ಹಲವಾರು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

 

LEAVE A REPLY