ಹಲ್ಲೆಗೈದ ಶಾಸಕನಿಗೆ ಮೂರು ವರ್ಷ ಜೈಲು

ಎಲೂರು : ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಆಂಧ್ರಪ್ರದೇಶ ಸರಕಾರದ ಸಚೇತಕ ಮತ್ತು ದೆಂಡುಲೂರು ಶಾಸಕ ಚಿಂತಾಮನೇಣಿ ಪ್ರಭಾಕರ್ ಎಂಬವರಿಗೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾಡೋಲೆಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 2,500 ರೂಪಾಯಿ ದಂಡ ವಿಧಿಸಿದೆ. 2011ರಲ್ಲಿ ದೆಂಡುಲೂರುವಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕವಾಗಿ ತನ್ನ ಮೇಲೆ ಪ್ರಭಾಕರ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿ ವಟ್ಟಿ ವಸಂತ್‍ಕುಮಾರ್ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು.

LEAVE A REPLY