ಐಎಎಸ್ ಅಧಿಕಾರಿಯ ನಿಂದನೆಗೈದ ಶಾಸಕ

ಬೆಂಗಳೂರು : ಮಾಯಕೊಂಡ ಶಾಸಕ ಕೆ ಶಿವಮೂರ್ತಿ ನಾಯ್ಕ್ ಅವರು ತಮ್ಮ ಕಚೇರಿಗೆ ನುಗ್ಗಿ ತನ್ನನ್ನು ನಿಂದಿಸಿದ್ದಾರೆಂದು  ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ  ಕಾರ್ಯದರ್ಶಿಯೂ ಹಿರಿಯ ಐಎಎಸ್ ಅಧಿಕಾರಿಯೂ ಆಗಿರುವ  ರಾಜೇಂದರ್ ಕುಮಾರ್ ಕಟಾರಿಯಾ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದು ದೂರಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬಳಿ ಬಾಕಿಯಿರುವ ಶಾಸಕನ ಪುತ್ರ ಸೂರಜ್ ನಾಯ್ಕನಿಗೆ ಸಂಬಂಧಿಸಿದ  ಕಡತಕ್ಕೆ ಕೂಡಲೇ ಅನುಮೋದನೆ ನೀಡುವಂತೆ  ಅವರು ತನ್ನ ಮೇಲೆ ಒತ್ತಡ ಹೇರಿದರೆಂದು  ಕಟಾರಿಯಾ ಆರೋಪಿಸಿದ್ದಾರೆ.