ಕಾಣೆಯಾದ ಯುವಕ ಶವವಾಗಿ ಪತ್ತೆ

ಉಮೇಶ್ ಶೆಟ್ಟಿ

ಇದು ಆತ್ಮಹತ್ಯೆಯೋ ಕೊಲೆಯೋ 

ನಮ್ಮ ಪ್ರತಿನಿಧಿ ವರದಿ
ಮುಲ್ಕಿ : ಕೆಲ ದಿನದ ಹಿಂದೆ ನಾಪತ್ತೆಯಾದ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ (29) ಭಾನುವಾರ ಮಧ್ಯಾಹ್ನ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ
ಕಿಲೆಂಜೂರು ರಾಮಕೃಷ್ಣ ಶೆಟ್ಟಿ ಹಾಗೂ ಪ್ರಭಾವತಿ ಶೆಟ್ಟಿ ಮಗನಾದ ಉಮೇಶ್ ಸ್ಥಳೀಯವಾಗಿ ಉತ್ತಮ ನಡತೆಯುಳ್ಳವರಾಗಿದ್ದು ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ತಮ್ಮ ಪಾಡಿಗೆ ವ್ಯವಹಾರ ಮಾಡಿಕೊಂಡಿದ್ದರು  ಮೂರು ವರ್ಷದ ಹಿಂದೆ ಮುಂಬಯಿಂದ ಊರಿಗೆ ಆಗಮಿಸಿ ಕಳೆದ ಕೆಲವು ತಿಂಗಳಿನಿಂದ ಪಣಂಬೂರಿನ ಟ್ರಾನ್ಸಫೋರ್ಟ್ ಉದ್ಯಮದಲ್ಲಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದರು. ವಾರದ ಹಿಂದೆ ಗೆಳೆಯರೊಂದಿಗೆ ತಾನು ಕ್ವಾರಿ ಉದ್ಯಮ ಪ್ರಾರಂಭಿಸುವ ಇರಾದೆಯಿದೆ ಎಂದು ತಿಳಿಸಿದ್ದರು ಎನ್ನಲಾಗಿದೆ
ದಿನಂಪ್ರತಿ ಪಣಂಬೂರಿಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದರು ಎಂದು ಮನೆಯವರು ತಿಳಿಸಿದ್ದಾರೆ  ಡಿಸೆಂಬರ್ 28ರಂದು ಸಂಜೆ ಪಕ್ಷಿಕೆರೆ ಬಳಿ ಬಸ್ಸಿನಿಂದ ಇಳಿದಿದ್ದು  ಬಳಿಕ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು  ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಪೊಲೀಸರು ತನಿಖೆ ಕೈಗೊಂಡು ಹುಡುಕಾಟ ನಡೆಸುತ್ತಿದ್ದರು
ಗಲ್ಪ್ ರಾಷ್ಟ್ರದಿಂದ ಕ್ರೈಸ್ತ ಕುಟುಂಬವೊಂದು ನಿಡ್ಡೋಡಿಗೆ ಕ್ರಿಸ್ಮಸ್ ರಜೆಗಾಗಿ ಊರಿಗೆ ಬಂದಿದ್ದರು  ಡಿಸೆಂಬರ್ 30ರಂದು ತಮ್ಮ ಜಮೀನು ವೀಕ್ಷಣೆಗೆಂದು ಬಂದಿದ್ದಾಗ ಉಮೇಶ್ ಶೆಟ್ಟಿಯ ಮತದಾರರ ಗುರುತು ಚೀಟಿ ಹಾಗೂ ಪರ್ಸ್ ಸಿಕ್ಕಿತ್ತು  ಕಟೀಲು ಅಜಾರು ಸಮೀಪದ ಸ್ನೇಹಿತರೊಬ್ಬರಿಗೆ ಕಿಲೆಂಜೂರಿನಲ್ಲಿ ಈ ಬಗ್ಗೆ ವಿಚಾರಿಸಿ ಎಂದು ತಿಳಿಸಿ ಪರ್ಸ್ ಹಾಗೂ ಗುರುತು ಚೀಟಿ ನೀಡಿ ಗಲ್ಪ್ ರಾಷ್ಟ್ರಕ್ಕೆ ಆ ಕ್ರೈಸ್ತ ಕುಟುಂಬ ಹಿಂದಿರುಗಿತ್ತು
ಇಂದು ಬೆಳಿಗ್ಗೆ ಗುರುತು ಚೀಟಿ ಬಗ್ಗೆ ಹುಡುಕಾಟ ನಡೆಸಿದಾಗ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಗುಡ್ಡ ಪ್ರದೇಶದಲ್ಲಿ ಉಮೇಶ್ ಶೆಟ್ಟಿ ಶವವಾಗಿ ಪತ್ತೆಯಾಗಿದ್ದಾರೆ
ಇದು ವ್ಯವಸ್ಥಿತ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರ ಉನ್ನತ ತನಿಖೆಯಿಂದ ಹೊರಬೀಳಬೇಕಾಗಿದೆ
ಸ್ಥಳಕ್ಕೆ ಎಸಿಪಿ ರಾಜೇಂದ್ರ  ಡಿಸಿಪಿ ಕಾಂತರಾಜು  ಮುಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ  ಮೂಡಬಿದಿರೆ ಠಾಣಾಧಿಕಾರಿ ರಾಮಚಂದ್ರ ನಾಯಕ್  ಶ್ವಾನದಳ ಬೆರಳಚ್ಚು ಹಾಗೂ ಫೊರೆನಿಕ್ಸ್ ತಜ್ಞರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ