ಸುಳ್ಯದಿಂದ ನಾಪತ್ತೆಯಾದವ ಶವವಾಗಿ ಪತ್ತೆ

 ಕೊಲೆ ಆರೋಪಿಗಳಿಬ್ಬರ ದಸ್ತಗಿರಿ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಅಪಘಾತದ ಗಾಯಾಳು, ತಂದೆಯನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳಲೆಂದು ಬಂದಿದ್ದವನನ್ನು ಕಾರಿನಲ್ಲಿ ಅಪಹರಿಸಿ ಕೊಲೆಗೈದ ಆರೋಪಿಗಳಿಬ್ಬರನ್ನು ಸುಳ್ಯ ಪೆÇಲೀಸರು ದಸ್ತಗಿರಿಗೊಳಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೆÇಲೀಸ್ ಕಸ್ಟಡಿಗೆ ಪಡೆದರು.

ಮಾ 31ರಂದು ಮಡಿಕೇರಿಯ ತಾಳತ್ತಮನೆಯ ರವಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಬಂದವರು ನಾಪತ್ತೆಯಾಗಿದ್ದಾರೆಂದು ಅವರ

ಪತ್ನಿ ಜಲಜಾಕ್ಷಿ ಸುಳ್ಯ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದ ಬೆಂಬತ್ತಿದ ಸುಳ್ಯ ಪೆÇಲೀಸರು ಕೆವಿಜಿ ಆಸ್ಪತ್ರೆ ಬಳಿಯ ಸೀಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ರವಿಯನ್ನು ಕಾರಿನಲ್ಲಿ ಕರೆದೊಯ್ಯುವ ದೃಶ್ಯ ಕಂಡು ಬಂತೆನ್ನಲಾಗಿದೆ.

ಪೆÇಲೀಸರು ತನಿಖೆ ತೀವ್ರಗೊಳಿಸಿದಾಗ ಕಾರು ಮಡಿಕೇರಿಯದ್ದೆಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಡಾಲು ಎಂಬವನಿಗೂ ರವಿಗೂ ಹಣದ ವಿಚಾರದಲ್ಲಿ ತಕರಾರಿತ್ತು ಎಂದು ತಿಳಿದು ಬಂತೆನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೆÇಲೀಸರು ಡಾಲುವನ್ನು ವಶಕ್ಕೆ ಪಡೆದಾಗ ರವಿಯನ್ನು ಮಡಿಕೇರಿಯ ಸ್ಟೋನ್ ಹಿಲ್ ಎಂಬಲ್ಲಿಗೆ ಒಯ್ದು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ತಿಪ್ಪೆ ಗುಂಡಿಯಲ್ಲಿ ಹೂತಿಟ್ಟಿರುವುದಾಗಿ ಬಾಯಿಬಿಟ್ಟ ಎನ್ನಲಾಗಿದೆ.

ಡಾಲುವಿಗೆ ಹತ್ಯೆಯ ಸಂಚಿಗೆ ನೆರವಾದ ಕಾರು ಚಾಲಕ ಹರೀಶ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಕೊಲೆ ಮಾಡಲು ಸಹಕರಿಸಿದ ಜೀವನ್, ಪ್ರಮೋದ್, ಪ್ರಶಾಂತ್ ಎಂಬವರ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ.