ರೆಂಜಿಲಾಡಿಯಿಂದ ನಾಪತ್ತೆಯಾದವ ಬೆಂಗಳೂರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಜೂನ್ 15ರಂದು ಕಾಣೆಯಾಗಿದ್ದ ಪುತ್ತೂರು ತಾಲೂಕು ರೆಂಜಿಲಾಡಿ ಗ್ರಾಮದ ಪೆಲತ್ತಾಣೆ ಮನೆ ನಿವಾಸಿ ಅಬ್ಬಸ್ ಎಂಬವರ ಮಗ ಆದಂ ಅಲಿಯಾಸ್ ಸಾಧು (21) ಎಂಬಾತನನ್ನು ಉಪ್ಪಿನಂಗಡಿ ಪೆÇಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.ರಿಕ್ಷಾ ಚಾಲಕನಾದ ಈತ ಬಾಡಿಗೆ ಮಾಡಲು ಹೋದವನು, ಮಧ್ಯಾಹ್ನ 2 ಗಂಟೆ ವೇಳೆಗೆ ಪೇರಡ್ಕ ಪೆಟ್ರೋಲ್ ಪಂಪಿಗೆ ಹೋಗಿ ಪರಿಚಯದ ಧನಂಜಯ ಎಂಬವರನ್ನು ಕರೆದುಕೊಂಡು ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿಗೆ ಕರೆದೊಯ್ದಿರುವುದಾಗಿ, ಅಲ್ಲಿ ರಿಕ್ಷಾದಿಂದ ಇಳಿದು, ತನ್ನ ರಿಕ್ಷಾವನ್ನು ಪೆಟ್ರೋಲ್ ಪಂಪಿನಲ್ಲಿ ಇಡುವಂತೆಯೂ, ನಾನು ಸಂಜೆ ವೇಳೆಗೆ ಬಂದು ರಿಕ್ಷಾವನ್ನು ತೆಗೆದುಕೊಂಡು ಬರುವುದಾಗಿಯೂ, ಈಗ ನನ್ನನ್ನು ಕರೆದೊಯ್ಯಲು ಕಾರು ಬರುತ್ತದೆ ಎಂದು ತಿಳಿಸಿ ಹೋದವನು ಹಿಂತಿರುಗಿ ಬರಲಿಲ್ಲ ಎಂದು ಆದಂ ತಂದೆ ಅಬ್ಬಾಸ್ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೆÇಲೀಸರು ಆದಂನನ್ನು ಬೆಂಗಳೂರಿನ ಮೆಜೆಸ್ಟಿಕ್ಕಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಮೋಜು ಮಾಡಲು ಬೆಂಗಳೂರಿಗೆ ಹೋಗಿರುವುದಾಗಿ ಈತ ಪೆÇಲೀಸರಿಗೆ ತಿಳಿಸಿದ್ದಾನೆ.