ನಾಪತ್ತೆಯಾಗಿದ್ದವನ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಾಪತ್ತೆಯಾಗಿದ್ದ ಕೂಲಿಕಾರ್ಮಿಕನ ಶವ ಪತ್ತೆಯಾಗಿದೆ.

ನಾರಂಪಾಡಿ ಬಳಿಯ ಕೊರೆಕ್ಕಾನ ನಿವಾಸಿ ದಿ ಮಹಾಲಿಂಗ ನಾಯ್ಕ ಅವರ ಪುತ್ರ ಕೃಷ್ಣ ನಾಯ್ಕ (41) ಮೃತದೇಹ ಮನೆಯಿಂದ ಕೆಲವೇ ಮೀಟರ್ ದೂರದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೂ 14ರಿಂದ ಕೃಷ್ಣ ನಾಯ್ಕ ನಾಪತ್ತೆಯಾಗಿದ್ದರು. ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.