ಕಾಣೆಯಾದವ ಶವವಾಗಿ ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕಾಡಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೇಡಡ್ಕ ಪಾಯಂ ಉರುಳಾಯಿ ನಿವಾಸಿ ಹಾಗೂ ಸಿಪಿಎಂನ ಪಾಯಂ ಬ್ರಾಂಚ್ ಸದಸ್ಯ ಆಗಿರುವ ಕೆ ಬಾಲಕೃಷ್ಣನ್ (48) ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಇವರು ಫೆ 10ರಂದು ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೆÇೀನ್ ಅಂದು ಸ್ವಿಚ್ ಆಫ್ ಆಗಿತ್ತು. ಆ ಬಗ್ಗೆ ಮನೆಯವರು ಬೇಡಗ ಪೆÇಲೀಸರಿಗೆ ದೂರು ನೀಡಿದ್ದರು.

ಕೇರಳ-ಕರ್ನಾಟಕ ಗಡಿಪ್ರದೇಶವಾದ ಬಂದಡ್ಕ ಮಾಣಿಮೂಲೆ ಕನ್ನಾಡಿತ್ತೋಡಿನಲ್ಲಿರುವ ಕರ್ನಾಟಕ ಮೀಸಲು ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿ ಪಹರೆ ನಡೆಸುತ್ತಿದ್ದ ವೇಳೆ ಮರವೊಂದರ ಬಳಿ ಮೃತದೇಹ ಪತ್ತೆಯಾಗಿದೆ. ಸುದ್ದಿ ತಿಳಿದ ಬೇಡಗ ಮತ್ತು ಸುಳ್ಯ ಪೆÇಲೀಸರು ಮೃತದೇಹ ಪತ್ತೆಯಾದ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಪೆÇಲೀಸರು ಆಸ್ಪತ್ರೆಯಲ್ಲಿ  ಪರೀಕ್ಷೆಗೊಳಪಡಿಸಿದ್ದಾರೆ. ಮೃತದೇಹ ಪತ್ತೆಯಾದ ವಿಷಯ ತಿಳಿದ ಬಾಲಕೃಷ್ಣರ ಮನೆಯವರು ಸ್ಥಳಕ್ಕೆ ಆಗಮಿಸಿ, ಅದು ಬಾಲಕೃಷ್ಣರ ಮೃತದೇಹ ಎಂದು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೆÇಲೀಸರು ಸಂಬಂಧಿಕರಿಗೆ ಬಿಟ್ಟುಕೊಟ್ಟಿದ್ದಾರೆ.

ದಿ ಮಾಲಿಂಗು ನಾಯರ್-ನಾರಾಯಣಿ ದಂಪತಿ ಪುತ್ರರಾಗಿರುವ ಬಾಲಕೃಷ್ಣನ್ ಪತ್ನಿ, ಪುತ್ರ, ಪುತ್ರಿ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಬಾಲಕೃಷ್ಣರ ಸಾವಿನ ಬಗ್ಗೆ ಬೇಡಗ ಪೆÇಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.