ಕಾಣೆಯಾಗಿದ್ದ ಕುಣಿಗಲ್ ಬಾಲಕ ಧರ್ಮಸ್ಥಳದಲ್ಲಿ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ನಾಗೇಂದ್ರ ಪ್ರಸಾದ್ (14) ಎಂಬಾತನನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಗುರುವಾರ ಹೆತ್ತವರ ವಶಕ್ಕೊಪ್ಪಿಸಿದರು.

ಧರ್ಮಸ್ಥಳದ ವಾಹನ ನಿಲುಗಡೆ ಪ್ರದೇಶದಲ್ಲಿ ಪತ್ತೆಯಾದ ಈತನನ್ನು ಪೊಲೀಸರು ವಿಚಾರಿಸಿದಾಗ ಈತ ನಾಪತ್ತೆಯಾಗಿದ್ದ ಬಾಲಕನೆಂಬ ವಿಚಾರ ತಿಳಿದುಬಂದಿದೆ. ಈತನ ಮಾಹಿತಿಯಂತೆ ಕುಣಿಗಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ಧರ್ಮಸ್ಥಳ ಪೊಲೀಸರು ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.