ನಾಪತ್ತೆಯಾಗಿದ್ದ ಕಾಸರಗೋಡು ಯುವಕ ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿಗೆ ಬಲಿ

ನಮ್ಮ ಪ್ರತಿನಿಧಿ ವರದಿ

 ಕಾಸರಗೋಡು : ಕೇರಳದಿಂದ ನಾಪತ್ತೆಯಾಗಿ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸೇರಿದ್ದಾನೆಂದು ಶಂಕಿಸಲಾದ್ದ ಯುವಕನೊಬ್ಬ ಅಫ್ಗಾನಿಸ್ತಾನದಲ್ಲಿ ಡ್ರೋನ್ ದಾಳಿಯಲ್ಲಿ ಸಾವಿಗೀಡಾಗಿದ್ದಾನೆಂದು  ತಿಳಿದುಬಂದಿದೆ. ಕಾಸರಗೋಡು ಜಿಲ್ಲೆಯ ಪಡ್ನಾ ಮೂಲದವನಾದ  ಮುರ್ಷಿದ್ ಮೊಹಮ್ಮದ್ ಎಂಬ ಯುವಕ  ಅಫ್ಘಾನಿಸ್ತಾನದ ನಂಗರ್ಹರ್  ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಹತನಾಗಿದ್ದಾನೆದು ಮುಸ್ಲಿಂ ಲೀಗ್ ನಾಯಕ ಅಬ್ದುರ್ ರಹಿಮಾನ್ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಕೇರಳದಿಂದ ನಾಪತ್ತೆಯಾಗಿ ಮಧ್ಯ ಪೂರ್ವ ರಾಷ್ಟ್ರಕ್ಕೆ ಪ್ರಯಾಣಿಸಿದ್ದರೆನ್ನಲಾದ ಒಟ್ಟು 21 ಮಂದಿಯಲ್ಲಿ  ಮೊಹಮ್ಮದ್ ಕೂಡ ಒಬ್ಬನಾಗಿದ್ದ.

LEAVE A REPLY