ಕೋಮುವಾದದ ವಿರುದ್ಧ ನಡೆಯುವ ಸಮಾವೇಶಕ್ಕೆ ಸೆಪ್ಟೆಂಬರ್ 16ರಂದು ಕಮಲ್ ಹಾಸನ್ ಕೇರಳಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ನಟ ಕಮಲ ಹಾಸನ್ ಸೆಪ್ಟೆಂಬರ್ 16ರಂದು ಕಲ್ಲಿಕೋಟೆಯಲ್ಲಿ ಕೋಮುವಾದ ವಿರುದ್ಧ ನಡೆಯುವ ಅಲ್ಪಸಂಖ್ಯಾತರ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕಾರ್ಯಕ್ರಮದಲ್ಲಿ ಉಪಸ್ಥಿತಲಿರುವರು. ಹಿಂದೂ ಮತಾಂಧತೆಯ ವಿರುದ್ಧವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಕಮಲ ಹಾಸನ್ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದರು. ಕಮಲ್ ಹಾಸನ್ ತಮ್ಮ ರಾಜಕೀಯ ಪ್ರವೇಶವನ್ನು ಕೇರಳದಿಂದ ಆರಂಭಿಸಬೇಕೆಂದು ಕೇಳಿಕೊಂಡಿದ್ದರು.

ಕಮಲ್ ರಾಜಕೀಯ ಪ್ರವೇಶವು ದಕ್ಷಿಣ ಭಾರತದಲ್ಲಿ ಸಂಘ ಪರಿವಾರದ ರಾಜಕೀಯ ಏಳಿಗೆಗೆ ತಕ್ಕ ಮಟ್ಟಿನ ತಡೆಯಾಗಬಹುದೆಂದು ವಿಶ್ಲೇಶಿಸಲಾಗಿದೆ. ತಮಿಳುನಾಡಿನ ರಾಜಕೀಯದಲ್ಲಿ ಜಾತ್ಯತೀತ ಬಣವನ್ನು ಕಮಲ್ ಮುನ್ನಡೆಸಬೇಕು ಎನ್ನುವ ಬೇಡಿಕೆಯನ್ನು ಎಡರಂಗ ಮುಂದಿಟ್ಟಿದೆ.