ನೀಲೇಶ್ವರದಿಂದ ಕಾಣೆಯಾದ ದೋಣಿ, ನಾಪತ್ತೆಯಾದ ಯುವಕನ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೀಲೇಶ್ವರ ಅಳಿತ್ತಲ ಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ದೋಣಿ ಕಾಂಞಂಗಾಡ್ ಬಳಿಯ ವಡಕರ ಸದ್ದುಮುಖ್ ಕಿನಾರೆಯಲ್ಲಿ ಪತ್ತೆಯಾಗಿದೆ. ಅದೇ ರೀತಿ ನಾಪತ್ತೆಯಾಗಿರುವ ಕಾಂಞಂಗಾಡ್ ಪುದಿಯ ವಳಪ್ ಕಡಪ್ಪುರದ ನಿವಾಸಿ ಸುನಿಲ್ (40) ಶವ ಪತ್ತೆಯಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಓಖಿ ಚಂಡಮಾರುತಕ್ಕೆ ಸಿಲುಕಿ ಹಲವಾರು ಮಂದಿ ಕಷ್ಟ ಅನುಭವಿಸುತ್ತಿದ್ದರೂ ಸೂಕ್ತ ಪರಿಹಾರ ಸಿಗದ ಆಕ್ರೋಶಗೊಂಡ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಪ್ರತಿಭಟಿಸಿ ಮೀನು ಕಾರ್ಮಿಕರು ಜಿಲ್ಲಾ ಫಿಶರೀಸ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದರು.

ನೂರರಷ್ಟು ಮೀನು ಕಾರ್ಮಿಕರು ಕಚೇರಿಗೆ ತಲುಪಿ ಬೀಗ ಜಡಿದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಮೀನು ಕಾರ್ಮಿಕರೊಂದಿಗೆ ಚರ್ಚಿಸಿ ಕಚೇರಿಯ ಬೀಗ ತೆರೆಯಲಾಯಿತು.