ನಾಪತ್ತೆಯಾದ 15 ವರ್ಷದ ಬಾಲಕಿ ಚೆನ್ನೈಯಲ್ಲಿ, ಮನೆಯವರಿಂದ ಹಣ ಲಪಟಾಯಿಸಿದ ಇಬ್ಬರು ವಶಕ್ಕೆ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಾಞಂಗಾಡ್ ಪೆರಿಯದಲ್ಲಿರುವ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಕಲಿಯುತ್ತಿರುವ 10 ನೇ ತರಗತಿ ವಿದ್ಯಾರ್ಥಿನಿ ಚೆನ್ನೈನಲ್ಲಿ ಇರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಆಕೆ ಡಿಸಂಬರ್ 9ರಂದು ನಾಪತ್ತೆಯಾಗಿದ್ದಳು. ಇದೇ ಶಾಲೆಯ ವಿದ್ಯಾರ್ಥಿಯೊಂದಿಗೆ ಪರಾರಿಯಾಗಿರುವುದಾಗಿ ಶಂಕೆಯೊಂದಿಗೆ ಹೊಸದುರ್ಗ ಪೆÇಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು.
ಆದರೆ ನಾಪತ್ತೆಯಾದ ಬಾಲಕಿ ಶನಿವಾರ ಬೆಳಿಗ್ಗೆ ದೂರವಾಣಿಯಲ್ಲಿ ಮನೆಯವರನ್ನು ಸಂಪರ್ಕಿಸಿ ತಾನು ಚೆನ್ನೈನಲ್ಲಿರುವುದಾಗಿ ತಿಳಿಸಿದ್ದಾಳೆ. ಜತೆಯಾಗಿ ತೆರಳಿದ ವಿದ್ಯಾರ್ಥಿಯ ಸ್ನೇಹಿತ ತಮಿಳುನಾಡು ನಿವಾಸಿ ನೀಡಿದ ಮನೆಯೊಂದರಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಮಧ್ಯೆ ಬಾಲಕಿಯನ್ನು ಅಪಹರಿಸಿರುವುದಾಗಿ ಪ್ರಚಾರ ಅಧಿಕವಾಗುತ್ತಿದ್ದಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಮನೆಯವರಿಂದ ಹಣವನ್ನು ಲಪಟಾಯಿಸಿದ ಇಬ್ಬರನ್ನು ಪೆÇಲೀಸರು ಸೆರೆ ಹಿಡಿದಿದ್ದಾರೆ. ಪಾಣತ್ತೂರಿನ ಒಂದು ತಂಡ ಮನೆಯವರನ್ನು ಸಂಪರ್ಕಿಸಿ ನಾಪತ್ತೆಯಾದ ಬಾಲಕಿಯನ್ನು ನಾವು ಹುಡುಕಿ ಕೊಡುತ್ತೇವೆಂದು ಹೇಳಿ ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟು 10 ಸಾವಿರ ರೂಪಾಯಿ ಮುಂಗಡವಾಗಿ ಪಡೆದು ವಂಚಿಸಿರುವುದಾಗಿ ಮನೆಯವರು ಪೆÇಲೀಸರಿಗೆ ದೂರು ನೀಡಿದ್ದರು. ಆದರೆ ಇದೀಗ ಬಾಲಕಿ ಚೆನ್ನೈನಲ್ಲಿರುವುದಾಗಿ ಲಭಿಸಿದ ಮಾಹಿತಿಯಂತೆ ಪೆÇಲೀಸರು ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.