ಮಿಸ್ ಸುಪ್ರಾನ್ಯಾಶನಲ್ ವಿಜೇತೆ ಶ್ರೀನಿಧಿ ಶೆಟ್ಟಿಗೆ ತವರೂರು ಸ್ವಾಗತ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರು ಮೂಲದ ಶ್ರೀನಿಧಿ ಶೆಟ್ಟಿ ಮಂಗಳವಾರ ತವರಿಗೆ ಆಗಮಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಟುಂಬಿಕರು ಈಕೆಗೆ ಅದ್ದೂರಿ ಸ್ವಾಗತ ಕೋರಿದರು. ಮಾಲೆ ಹಾಕಿ ಆರತಿ ಎತ್ತಿ ಸ್ವಾಗತಿಸಿದರು.

ಶ್ರೀನಿಧಿ ಶೆಟ್ಟಿ ಮಂಗಳೂರಿನ ಕಿನ್ನಿಗೋಳಿಯವರು. ವಿಶ್ವದ 82 ರಾಷ್ಟ್ರಗಳ ಪೈಕಿ ಭಾರತವನ್ನು ಶ್ರೀನಿಧಿ ಶೆಟ್ಟಿ ಪ್ರತಿನಿಧಿಸಿದ್ದರು.

“ಫ್ಯಾಶನ್ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸುಕತೆ ಇದೆ. ಈಗಾಗಲೇ ಫ್ಯಾಶನ್ ಲೋಕದಿಂದ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಸೆ ಇದೆ” ಎಂದರು.