ಲೈಂಗಿಕತೆಗೆ ಸಹಕರಿಸದಿದ್ದಕ್ಕೆ ಚಲಿಸುವ ರೈಲಿನಿಂದಲೇ ಎಸೆದ್ರು

ಕೋಲ್ಕತ್ತಾ : ಮಹಿಳೆಯೋರ್ವಳ ಮೇಲೆ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಆಕೆಯನ್ನು ಚಲಿಸುವ ರೈಲಿನಿಂದಲೇ ಹೊರಗೆ ತಳ್ಳಿ ಅಟ್ಟಹಾಸ ಮೆರೆದಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ನಾರ್ಥ್ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಹಸ್ನಾಬಾದ್ ಸ್ಥಳೀಯ ರೈಲಿನಲ್ಲಿ ಸೋಮಾವರ ರಾತ್ರಿ ಸಂತ್ರಸ್ತೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಚಲಿಸುವ ರೈಲಿನಿಂದಲೇ ಹೊರಗೆ ಎಸೆದಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಬಳಿಕ ಬೆಳಗ್ಗೆ ಸ್ಥಳೀಯರು ಹಳಿಯ ಮೇಲೆ ಬಿದ್ದಿದ್ದ ಮಹಿಳೆಯನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಬರಸತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರ್ ಪಿ ಎಫ್ ಅಧಿಕಾರಿ ಹೇಳಿದ್ದಾರೆ.

ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.