ಮನೆ ಎದುರು ರಿಕ್ಷಾಕ್ಕೆ ಕಿಚ್ಚಿಟ್ಟ ಕಿಡಿಗೇಡಿಗಳು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಾಡಿಗೆ ಮನೆಯೊಂದರ ಮುಂಬಾಗದಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾವೊಂದಕ್ಕೆ ಕಿಡಿಗೇಡಿಗಳು ಕಿಚ್ಚಿಟ್ಟು ನಾಶಗೊಳಿಸಿದ ಘಟನೆ ಉಳಿಯತ್ತಡ್ಕ ಸಮೀಪದ ಎಸ್ಪಿ ನಗರದಲ್ಲಿ ಸಂಭವಿಸಿದೆ.

ಉಳಿಯತ್ತಡ್ಕ ಆಟೋ ಸ್ಟಾಂಡ್ ಚಾಲಕ ಪದ್ಮನಾಭ ಎಂಬವರ ಆಟೋ ರಿಕ್ಷಾ ಬೆಂಕಿಯಿಂದ ನಾಶಗೊಂಡಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.

ಯಾವ ಕಾರಣಕ್ಕೆ ಬೆಂಕಿ ಇಡಲಾಗಿದೆ ಎಂದು ತಿಳಿದುಬಂದಿಲ್ಲ. ಉಳಿಯತ್ತಡ್ಕ ಆಟೋ ಚಾಲಕರು ಸೋಮವಾರದಂದು ಅಲ್ಪ ಸಮಯ ಪ್ರತಿಭಟನೆ ನಡೆಸಿದ್ದಾರೆ.