ಪುತ್ತೂರು ಕಸಬಾದಲ್ಲಿ ಅಬ್ಬೆಪಾರಿ ಯುವಕರಿಂದ ನಾಗರಿಕರಿಗೆ ಕಿರುಕುಳ

ಪುತ್ತೂರು ಕಸಬಾ ವ್ಯಾಪ್ತಿಯ ಪಡೀಲ್ ಎಂಬಲ್ಲಿ ಚಾಮುಂಡೇಶ್ವರೀ ಗ್ಯಾರೇಜ್ ಎದುರು ಇರುವ ವೆಲ್ಕಮ್ ಸ್ಟೋರ್ ಅಂಗಡಿಯ ಎದುರು ಸಂಜೆ 7ರಿಂದ 10 ಗಂಟೆ ರಾತ್ರಿಯವರೆಗೆ ಸುಮಾರು 10ರಿಂದ 20 ಜನರು ಇರುವ ಗುಂಪು ಸೇರುತ್ತಿದ್ದು ತೀರಾ ಅನಾಗರಿಕವಾಗಿ ವರ್ತಿಸುತ್ತಾರೆ ರಸ್ತೆ ಬದಿಯಲ್ಲಿ ರಾತ್ರಿ ಹೊತ್ತು ನಡೆದಾಡಿಕೊಂಡು ಹೋಗುವವರನ್ನು ತಮಾಷೆ ಮಾಡುವುದಲ್ಲದೆ  ಯುವಕರ ವರ್ತನೆಯಿಂದ ಸಮೀಪದಲ್ಲಿರುವ ಯಾವುದೇ ಅಂಗಡಿ ಬೇಕರಿ  ಹೋಟೆಲ್ ಸಲೂನುಗಳಿಗೆ ಗಿರಾಕಿಗಳು ಬರದೇ ಇರುವ ಅವಸ್ಥೆಗೆ ಕಾರಣರಾಗಿದ್ದಾರೆ  ಕಟ್ಟಡದ ಹಿಂಭಾಗದಲ್ಲಿ ಜನವಸತಿಯಿರುವ 12ರಿಂದ 15ಕ್ಕೂ ಮಿಕ್ಕಿದ ಮನೆಗಳಿದ್ದು ಅನಾಗರಿಕವಾಗಿ ವರ್ತಿಸಬಾರದು ಎನ್ನುವ ಪರಿಜ್ಞಾನವೂ ಇವರಿಗೆ ಇಲ್ಲ
ಕೋಮು ಅಶಾಂತಿಯನ್ನು ಒಡಲಲ್ಲಿ ತುಂಬಿಕೊಂಡಿರುವ ಪುತ್ತೂರಿನಲ್ಲಿ ರಸ್ತೆಯ ಎದುರುಬದಿಯಲ್ಲಿ ಇರುವ ಅನ್ಯಧರ್ಮದ ಮಕ್ಕಳು ಇಳಿಸಂಜೆಯ ಹೊತ್ತು ವರಾಂಡದಲ್ಲಿ ಕುಳಿತು ಶಾಲಾ ಪಠ್ಯವನ್ನು ಓದುತ್ತಿರುವ ಹೊತ್ತಲ್ಲಿ ವಿಸಿಲು ಹೊಡೆಯುವುದು  ಹಾಕಿರುವ ವಸ್ತ್ರದ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನು ಮಾಡುತ್ತಾರೆ
ಹಲವು ಸಮಯಗಳ ಹಿಂದೆ ಇವರು ತೋರಿಸುವ ಇಂತಹ ಅನಾಗರಿಕ ಲಜ್ಜೆಗೆಟ್ಟ ವರ್ತನೆ ಹಿಂದೂಪರ ಸಂಘಟನೆಯ ಮುಖಂಡರಿಗೂ ಗೊತ್ತಾಗಿ ಎಚ್ಚರಿಕೆಯನ್ನೂ ನೀಡಿರುತ್ತಾರೆ  ನಂತರ ಕೆಲ ದಿನಗಳ ಕಾಲ ತಮ್ಮ ಅಡ್ಡೆಯನ್ನು ಬದಲಾಯಿಸಿದ ಇವರು ಪ್ರಸ್ತುತ ಇಲ್ಲಿಯೇ ಮತ್ತೆ ಠಿಕಾಣಿ ಹೂಡಲು ಪ್ರಾರಂಭಿಸಿರುತ್ತಾರೆ  ಶಾಂತವಾದ ಈ ಪ್ರದೇಶದಲ್ಲಿ ಕೋಮು ಅಶಾಂತಿಗೆ ಯಾವುದೇ ಆಸ್ಪದವನ್ನು ಕೊಡಬಾರದು ಎನ್ನುವ ಕಾರಣಕ್ಕಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸಿದ್ದೇವೆ  ಪೊಲೀಸ್ ಅಧಿಕಾರಿಗಳು ಬಂದು ಯುವಕರಿಗೆ ಎಚ್ಚರಿಕೆಯನ್ನು ಕೂಡಾ ಕೊಟ್ಟು ಹೋಗಿದ್ದು ಒಂದೆರಡು ದಿನ ಶಾಂತವಾಗಿ ಇದ್ದು ನಂತರ ಅಲ್ಲಿಯೇ ಬಂದು ಕುಳಿತುಕೊಳ್ಳಲು ಆರಂಭಿಸಿದರು
ಒಂದು ನಗರ ಸಮಾಜದ ಸ್ವಾಸ್ಥ್ಯವನ್ನು ಉಳಿಸುವಲ್ಲಿ ಯುವಕರು ಮತ್ತು ಪೊಲೀಸ್ ಇಲಾಖೆಯು ಪಾತ್ರ ಗಮನಾರ್ಹವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಯುವಕರು ಒಟ್ಟು ಸೇರಿ ಸ್ವಾಸ್ಥ್ಯವನ್ನು ಕೆಡಿಸಲು ಅವಕಾಶವನ್ನು ನೀಡುವ ಕಟ್ಟಡದ ಮಾಲಕರಿಗೂ ಸೂಕ್ತ ಎಚ್ಚರಿಕೆಯನ್ನು ಪೊಲೀಸ್ ಇಲಾಖೆಯಿಂದ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ

 
ನೊಂದಿರುವ ಪರಿಸರವಾಸಿಗಳು (ಹಲವಾರು ಸಹಿಗಳಿವೆ)