ಪೂಜಾ ಕಾರ್ಯಕ್ರಮದ ಫ್ಲೆಕ್ಸ್ ಹರಿದ ಕಿಡಿಗೇಡಿಗಳು

ಫ್ಲೆಕ್ಸ್ ಹರಿದಿರುವುದು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ದುರ್ಗಾ ಪೂಜೆಯ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಫ್ಲೆಕ್ಸುಗಳನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ ಘಟನೆ ಬಿಳಿಯೂರು ಗ್ರಾಮದ ಕರ್ವೇಲಿನಲ್ಲಿ ನಡೆದಿದೆ.

ಇಲ್ಲಿನ ಶ್ರೀರಾಮ ಭಜನಾ ಮಂದಿರದಲ್ಲಿ ಜ 20 ಹಾಗೂ 21ರಂದು ಶ್ರೀ ದುರ್ಗಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಇದರ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಫ್ಲೆಕ್ಸ್ ಕರ್ವೇಲಿನ ಶ್ರೀ ರಾಮ ಭಜನಾ ಮಂದಿರದ ಬಳಿಯೇ ಹಾಕಲಾಗಿತ್ತು. ಫ್ಲೆಕ್ಸಿನಲ್ಲಿ ಶ್ರೀ ದುರ್ಗೆ, ಶ್ರೀ ರಾಮ ಹಾಗೂ ಶ್ರೀ ಸತ್ಯನಾರಾಯಣ ದೇವರ ಚಿತ್ರಗಳಲ್ಲದೆ, ಕೆಳಗಡೆ ಶಿವಾಜಿಯ ಚಿತ್ರವನ್ನು ಮುದ್ರಿಸಲಾಗಿತ್ತು. ಕಿಡಿಗೇಡಿಗಳು ಈ ಫ್ಲೆಕ್ಸ್ ಹರಿದು ಹಾಕಿದ್ದು, ಫ್ಲೆಕ್ಸಿನಲ್ಲಿದ್ದದೇವರ ಚಿತ್ರಗಳಿಗೆ ಯಾವುದೇ ಹಾನಿ ಮಾಡದೇ ಮುಖ್ಯವಾಗಿ ಶಿವಾಜಿಯ ಚಿತ್ರವನ್ನು ಹರಿದಿರುವುದು ಕಂಡುಬಂದಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ದುಷ್ಕøತ್ಯವೆಸಗಿರಬಹುದೆಂದು ಶಂಕಿಸಲಾಗಿದ್ದು, ಬುಧವಾರ ಬೆಳಗ್ಗೆ ಇದು ಸಾರ್ವಜನಿಕರ ಗಮನಕ್ಕೆ ಬಂದಿದೆ.