ಕಿಡಿಗೇಡಿಗಳಿಂದ ಪಂ ನೀರಿನ ಪೈಪು ಧ್ವಂಸ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಅಜೆಕಾರು ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರೆಂಚಿಬೈಲು ಎಂಬಲ್ಲಿ ಅಳವಡಿಸಲಾಗಿದ್ದ ನೀರು ಸರಬರಾಜು ಪೈಪ್ ಲೈನನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ನಡೆದಿದೆ.

ಮರ್ಣೆ ಗ್ರಾಮ ಪಂಚಾಯಿತಿಯು ಕಿರೆಂಚಿಬೈಲು-ದೆಪ್ಪುತ್ತೆ ಪರಿಸರದ ಜನರಿಗೆ ಕುಡಿಯುವ ನೀರು ಪೂರೈಕೆಗೆ ಈ ಪೈಪ್ ಲೈನ್ ಅಳವಡಿಸಿದ್ದು, ಇದೀಗ ಬೇಸಗೆಯ ಸಮಯವಾಗಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕುರಿತು ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಪಂಚಾಯಿತಿ ಅಧ್ಯಕ್ಷರಾದ ದಿನೇಶ್ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.