ಆಡಳಿತದ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದ ಸತ್ಯ ಶೋಧನಾ ತಂಡ

ಸಾಂದರ್ಭಿಕ ಚಿತ್ರ

ಅಪ್ರಾಪ್ತೆ ಅತ್ಯಾಚಾರ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೆಳ್ತಂಗಡಿ ತಾಲೂಕಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ವಿರುದ್ಧ ಹಾಗೂ ಈ ಪ್ರಕರಣದ ಬಗ್ಗೆ ಅನಾಸ್ಥೆ ತೋರಿಸಿದ ಸ್ಥಳೀಯಾಡಳಿತದ ವಿರುದ್ಧ ಬಾಲಾಪರಾಧಿ ಕಾಯಿದೆಂiÀiನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸತ್ಯ ಶೋಧನಾ ತಂಡದ ಸದಸ್ಯರು ಆಗ್ರಹಿಸಿದ್ದಾರೆ.

ಕಳಂಜ ಗ್ರಾಮ ಪಂಚಾಯತ್ ಹಾಗೂ ಅಲ್ಲಿನ ಕೆಲ ಸಮಾಜ ಸೇವಾ ಸಂಘಟನೆಗಳಿಗೆ ಬಾಲಕಿಯ ತಾಯಿ ಬೆಳ್ತಂಗಡಿಯ ಆಶ್ರಮವೊಂದರಲ್ಲಿ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದರಿಂದ ಅನಾಥಳಾಗಿದ್ದ ಬಾಲಕಿಯ ದುಃಸ್ಥಿತಿಯ ಬಗ್ಗೆ ಅರಿವಿದ್ದರೂ ಆಕೆಯ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡರಿಲಿಲ್ಲ ಎಂದು ಶಿಕ್ಷಣ ರಕ್ಷಣ ವೇದಿಕೆ ಅಧ್ಯಕ್ಷ ಲೋಲಾಕ್ಷ ಆರೋಪಿಸಿದ್ದಾರೆ.

ಆಕೆಯ ಸಂಕಷ್ಟದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದರೆ ಆಕೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಬಹುದಾಗಿತ್ತು. ಆದುರಿಂದ ಆರೋಪಿಗಳ ಜತೆ ಸ್ಥಳೀಯಾಡಳಿತದ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಹೇಳಿದರು.

ವೇದಿಕೆಯ ಕಾರ್ಯಕಾರಿ ಅಧ್ಯಕ್ಷ ರೀನಿ ಡಿ’ಸೋಜ ಕೂಡ ಮಾತನಾಡಿ, ಧರ್ಮಸ್ಥಳ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಒಂದು ವಾರವಾದರೂ ಮಕ್ಕಳ ಕಲ್ಯಾಣ ಸಮಿತಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಯಾವುದೇ ಅಧಿಕಾರಿಗಳು ಇಲ್ಲವೇ ಜಿಲ್ಲಾಧಿಕಾರಿ ಸಂತ್ರಸ್ತೆಂiÀiನ್ನು ಕಂಡು ಮಾತನಾಡಿಸಿಲ್ಲ ಎಂದು ದೂರಿದ್ದಾರೆ.

ಜಿಲ್ಲಾ ಪರಿಶಿಷ್ಟ ಜಾತಿ/ವರ್ಗಗಳ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕೂಡಲೇ ಸಂತ್ರಸ್ತೆಗೆ ಪರಿಹಾರವೊದಗಿಸಬೇಕಿತ್ತು ಎಂದೂ ಅವರು ಹೇಳಿದ್ದಾರೆ.