ಕಾರಿನೊಳಗೆ 8 ವರ್ಷದ ಬಾಲೆ ರೇಪ್ & ಮರ್ಡರ್

ಸಾಂದರ್ಭಿಕ ಚಿತ್ರ

ಲಕ್ನೋ : ಹಸನ್‍ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರಲನಗರದಲ್ಲಿರುವ ಹಳೆ ವಾಹನಗಳ ಮಾರಾಟ ಬಜಾರಿನಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ನಾಪತ್ತೆಯಾಗಿದ್ದ 8 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ನಗರದಲ್ಲಿ ಬಾಲಕಿಯ  ಸಾಮೂಹಿಕ ಅತ್ಯಾಚಾರ ನಡೆದಿತ್ತು. ಭಾನುವಾರದಂದು ಎರಡನೇ ತರಗತಿಯ ಬಾಲಕಿ ನಾಪತ್ತೆಯಾಗಿದ್ದಳು. ಈಕೆ ದುಷ್ಕರ್ಮಿಗಳು ನಡೆಸಿದ ಅತ್ಯಾಚಾರ ಬಳಿಕ ಮೃತಪಟ್ಟಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. 17 ವರ್ಷದ ಯುವಕನೊಬ್ಬ ಈಕೆಗೆ ಪ್ರತಿದಿನ ಚಾಕಲೇಟು ನೀಡುವ ಆಮಿಷವೊಡ್ಡಿ ಕರೆದುಕೊಂಡು ಹೋಗುತ್ತಿದ್ದ. ದೂರಿನಂತೆ ಪೊಲೀಸರು ವಾಲ್ಮೀಕಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.