ಹದಿನೇಳರ ಯುವಕ ಚಲಾಯಿಸಿದ ಬೈಕ್, ಸಹೋದರನ ವಿರುದ್ದ ಕೇಸು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು:  17 ವರ್ಷ ಪ್ರಾಯದ ಯುವಕನೊಬ್ಬ ಚಲಾಯಿಸಿದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿ ಯುವಕನ ಸಹೋದರನ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ.

ಚೆಮ್ನಾಡ್ ಜಂಕ್ಷನ್ನಿನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಪೊಲೀಸರು ಆ ದಾರಿಯಾಗಿ ಬೈಕಿನಲ್ಲಿ ಬಂದ ಯುವಕನನ್ನು ತಡೆದು ವಿಚಾರಿಸಿದಾಗ ಅಪ್ರಾಪ್ತ ಬಾಲಕನೆಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಬೈಕನ್ನು ವಶಕ್ಕೆ ತೆಗೆದು ಸಹೋದರನ ವಿರುದ್ದ  ಕೇಸು ದಾಖಲಿಸಲಾಗಿದೆ. ಕೆ ಎಲ್ 6. ಎ 1099 ನೋಂದಾವಣೆಯ ಬೈಕ್ ನ್ನುಪೊಲೀಸರು ಕೈಯಾರೆ ಸೆರೆ ಹಿಡಿದಿದ್ದಾರೆ.