ಸಿಪಿಎಂ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ : ಅಪ್ರಾಪ್ತ ಯುವಕ ಸೇರಿದಂತೆ ಐವರ ಸೆರೆ

ಮಂಜೇಶ್ವರ : ಬಾಡೂರು ಲೋಕಲ್ ಕಮಿಟಿ ಸದಸ್ಯ ಹಾಗೂ ತಲಮುಗರು ನಿವಾಸಿ ವೇಣು ಗೋಪಾಲ ಶೆಟ್ಟಿ ಎಂಬವರಿಗೆ (42) ಹಲ್ಲೆಗೈದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೆÇಲೀಸರು ಅಪ್ರಾಪ್ತ ಯುವಕ ಸೇರಿದಂತೆ ಐವರನ್ನು ಸೆರೆ ಹಿಡಿದಿದ್ದಾರೆ.

ಧರ್ಮತ್ತಡ್ಕ ಚಳಕೈ ನಿವಾಸಿ ಎಸ್ ಎ ಸಯೀದ್ (19), ಮೊಹಮ್ಮದ್ ಶಫೀಕ್ (22), ಧರ್ಮತ್ತಡ್ಕ ಮಂಗಲಡ್ಕ ನಿವಾಸಿ ಹಾಸಿಬ್ (21), ಚಳ್ಳಕೈ ನಿವಾಸ್ ಇಬ್ರಾಹಿಂ ಬಾತಿಷಾ ಹಾಗೂ ಅಪ್ರಾಪ್ತ ವಯಸ್ಸಿನ ಯುವಕ ಸೆರೆಗೀಡಾದ ಆರೋಪಿಗಳಾಗಿದ್ದಾರೆ.

ಈ ತಿಂಗಳು 1ಕ್ಕೆ ಕನಿಯಾಲದಲ್ಲಿ ಹಾಲು ಮಾರಿ ಮರಳಿ ಮನೆಯ ಕಡೆ ಬರುತಿದ್ದ  ಗೋಪಾಲ ಶೆಟ್ಟಿಯವರನ್ನು ತಡೆದು ನಿಲ್ಲಿಸಿ ಪೆÇಲೀಸರಿಗೆ ದೂರು ನೀಡಿರುವುದನ್ನು ಪ್ರಶ್ನಿಸಿ ಹಲ್ಲೆಗೈದಿರುವುದಾಗಿ ದೂರಲಾಗಿತ್ತು. ಈ ಘಟನೆಗೆ ಕೆಲ ದಿನಗಳ ಮುಂಚಿತವಾಗಿ ಇನ್ನೊಂದು ಪ್ರಕರಣದಲ್ಲಿ ವೇಣುಗೋಪಾಲರಿಗೆ ಹಲ್ಲೆಗೈಯಲಾಗಿತ್ತು. ಈ ಬಗ್ಗೆ ವೇಣುಗೋಪಾಲ್ ಶೆಟ್ಟಿ ಪೆÇಲೀಸರಿಗೆ ದೂರು ನೀಡಿದ್ದರು.