ಪಾದಗಳಿಗೆ ರಕ್ಷಣೆ ಕೊಡುವ ಚಪ್ಪಲಿ ನಿಕೃಷ್ಟವಾಗಿ ಕಾಣುವುದು ತಪ್ಪಲ್ಲವೇ

ಮಂಗಳೂರಿನಲ್ಲಿ ಸೌಹಾರ್ದ ರ್ಯಾಲಿಯನ್ನು ವಿರೋಧಿಸುವವರು ಚಪ್ಪಲಿಗಿಂತ ಕೀಳು ಎಂದು ರಾಜ್ಯದ ಸಚಿವರೊಬ್ಬರು ಟೀಕಿಸಿದ್ದು ಗಮನಿಸಿರಬಹುದು. ಅವರ ವಾದ ಏನೇ ಇರಲಿ. ಈ ವಿವಾದದಲ್ಲಿ ಚಪ್ಪಲಿ ಪ್ರವೇಶವಾಗಿರುವುದು ಸಹ್ಯವಲ್ಲ. ಪಾದಗಳಿಗೆ ರಕ್ಷಣೆ ಕೊಡುವ ಚಪ್ಪಲಿಯನ್ನು ನಿಕೃಷ್ಟವಾಗಿ ಕಾಣುವುದು ತಪ್ಪು. ವನವಾಸಕ್ಕೆ ಹೋದ ರಾಮನ ಪಾದರಕ್ಷೆಗಳನ್ನು ಸಿಂಹಾಸನದ ಮೇಲಿಟ್ಟು ಪೂಜಿಸಿದ ಭರತ ಶರಣು ಶರಣಾರ್ಥಿ ಎಂದು ಹೇಳಿದ ಬಸವಣ್ಣನಿಗೆ ತನ್ನ ಚರ್ಮದಿಂದ ಚಪ್ಪಲಿ ಕೊಟ್ಟು ತಯಾರಿಸಿ ಕೊಟ್ಟು ಧನ್ಯತಾಭಾವ ತಾಳಿದ ಶರಣ ಮಾಚಯ್ಯ ಇವರಿಗೆಲ್ಲ ಗೌರವದ ಸಂಕೇತವಾಗಿದ್ದ ಚಪ್ಪಲಿಯನ್ನು ಹೀಗೆ ತುಚ್ಛವಾಗಿ ಕಾಣುವುದು ಸರಿಯೇ  ತನಗಾಗದವರನ್ನು ನಾಯಿ ವಾನರಗಳಿಗೆ ಹೋಲಿಸುವ ಕೆಟ್ಟ ಪ್ರವೃತ್ತಿ ನಾಯಕರಲ್ಲಿ ಹುಟ್ಟಿಕೊಂಡಿರುವುದೂ ಸಹ ಸಭ್ಯತೆಯ ಲಕ್ಷಣವಲ್ಲ

  • ಅವಿನಾಶ್ ಎಂ ಕುದ್ರೋಳಿ