ಮಾದಕ ಪದಾರ್ಥ ಮಾರಾಟ ಮಾಫಿಯಾ ವಿರುದ್ದ ಕ್ರಮ : ಸಚಿವರಿಂದ ಆದೇಶ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶಾಲಾ ಕಾಲೇಜುಗಳ ಪರಿಸರದಲ್ಲಿ ಲಹರಿ ಮಾದಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ಪೆÇಲೀಸರು ಹಾಗೂ ಅಬಕಾರಿ ದಳ ಕಠಿಣ ಕ್ರಮಕ್ಕೆ ಮುಂದಾಗುವಂತೆ ಸಚಿವ ಇ ಚಂದ್ರಶೇಖರನ್ ಆದೇಶ ನೀಡಿದ್ದಾರೆ.

ಎನ್ ಎಸ್ ಎಸ್, ಎನ್ ಸಿ ಸಿ, ಸ್ಕೌಟ್, ಸ್ಟೂಡೆಂಟ್ ಪೆÇಲೀಸ್, ಲಹರಿ ವಿರುದ್ದ ಕ್ಯಾಂಪ್  ಮೊದಲಾದವರ ಸಹಾಯದೊಂದಿಗೆ ವಿದ್ಯಾಬ್ಯಾಸ ಸ್ಥಾಪನೆಗಳ ಪರಿಸರದಲ್ಲಿ ಮಾದಕ ಪದಾರ್ಥ ಮಾರಾಟವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದರು.

“ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ಬಗ್ಗೆ ಸಾರ್ವಜನಿಕರು ದೂರು ನೀಡಲು ಹಿಂದೇಟು ಹಾಕದಂಥ ಪರಿಸ್ಥಿತಿಯನ್ನು ನಿರ್ಮಾಣಗೊಳಿಸುವಂತಹ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕಾಗಿದೆ. ಸಾರ್ವಜನಿಕರಿಂದ ದೂರು ಬಂದ ಕೂಡಲೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು” ಎಂದು ಸಚಿವರು ಹೇಳಿದರು.

ವಿದ್ಯಾಭ್ಯಾಸ ಕೇಂದ್ರಗಳ ಪರಿಸರವನ್ನು ಕೇಂದ್ರೀಕರಿಸಿ ರಾತ್ರಿ ಲಹರಿ ಮಾಫಿಯಾ ನಡೆಸುತ್ತಿರುವ ಅಟ್ಟಹಾಸವನ್ನು ತಡೆಯಬೇಕೆಂದು ಶಾಸಕ ಎನ್ ಎ ನೆಲ್ಲಿಕುನ್ನು ಕೂಡಾ ಆಗ್ರಹಿಸಿದರು.

ಬಸ್ ನಿಲ್ದಾಣ ಹಾಗೂ ಇತರ ಕೆಲವು ಪ್ರದೇಶಗಳಲ್ಲಿ ಲಹರಿ ಮಾಫಿಯಾದ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಇವರ ಆಮಿಷಕ್ಕೆ ವಿದ್ಯಾರ್ಥಿಗಳೇ ಹೆಚ್ಚಾಗಿ ಬಲಿಯಾಗುತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 20ರಂದು ಸಭೆಯನ್ನು ಕರೆದು ಲಹರಿ ವಿರುದ್ದ ಕಾರ್ಯಾಚರಣೆಗೆ ಸಮಾಲೋಚನೆ ನಡೆಸಲು ತೀರ್ಮಾನಿಸಲಾಯಿತು.

ಪ್ರತಿಯೊಂದು ಪಂಚಾಯತ್ ವಾರ್ಡು ಮಟ್ಟದಲ್ಲಿ ಈ ಬಗ್ಗೆ ಮಾಹಿತಿ ಶಿಬಿರ ನಡೆಸಿ ದುಶ್ಚಟಕ್ಕೆ ಬಲಿಯಾಗುವ ವಿದ್ಯಾರ್ಥಿಗಳ ಮನವೊಲಿಸುವಂತೆ ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ, ಶಾಸಕರು, ಅಧಿಕಾರಿಗಳ ಸಹಿತ ಹಲವರು ಇದ್ದರು.