ಸಚಿವ ಮಹದೇವಪ್ಪ ಕಾರಿನ ಟೈರ್ ಸ್ಫೋಟ

ಮೈಸೂರು : ಮೈಸೂರಿನಲ್ಲಿ ಬುಧವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ ರಿಂಗ್ ರಸ್ತೆ ಸಾತಗಳ್ಳಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಕಾರು ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ.

ಅಪಘಾತದಿಂದ ಅದೃಷ್ಟವಶಾತ್ ಯಾವುದೇ ಹಾನಿಯುಂಟಾಗಿಲ್ಲ. ಬ್ಯಾರಿಕೇಡ್ ಬಳಿ ಪೆÇಲೀಸ್ ಎಸ್ಕಾರ್ಟ್ ವೇಗ ಕಡಿಮೆಗೊಳಿಸಿದಾಗ ಹಿಂದೆ ಬರುತ್ತಿದ್ದ ಸಚಿವರ ಕಾರಿನ ಟೈರ್ ಬಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪೆÇಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಸಚಿವರು ಪ್ರತ್ಯೆಕ ವಾಹನದಲ್ಲಿ ತೆರಳಿದ್ದಾರೆ.