ಮಿಲ್ಮಾ ಹಾಲು

ಮಿಲ್ಮಾ ಹಾಲು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಿಲ್ಮಾ ಹಾಲಿನ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. ಫೆಬ್ರವರಿ ಮೊದಲ ವಾರ ಬೆಲೆಯೇರಿಕೆ ಜಾರಿಗೆ ಬರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಹಾಲುತ್ಪಾದನೆಯಲ್ಲುಂಟಾದ ಕಡಿತ ಬೆಲೆಯೇರಿಕೆಗೆ ಕಾರಣವಾಗಿದೆ. ಪ್ರತಿದಿನ ಒಂದು ಲಕ್ಷ ಲೀಟರ್ ಹಾಲಿನ ಕೊರತೆಯುಂಟಾಗುತ್ತಿದೆ. ಮಿಲ್ಮಾ ಪ್ರತಿದಿನ ಹತ್ತೂವರೆ ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಹಾಲಿನ ಬೆಲೆಯೇರಿಕೆಯಿಂದ ಗ್ರಾಹಕರಿಗೆ ಭಾರೀ ಆರ್ಥಿಕ ಹೊರೆಯುಂಟಾಗುವ ಸಾಧ್ಯತೆಯಿದೆ. ಹಾಲಿನ ಬೆಲೆಯೇರಿಕೆ ಜತೆಗೆ ಪಶು ಆಹಾರದ ಬೆಲೆಯಲ್ಲೂ ಏರಿಕೆಯಾಗಲಿದೆ. ಆದ್ದರಿಂದ ಹಾಲು ಬೆಲೆಯೇರಿಕೆಯಿಂದ ಕೃಷಿಕರಿಗೆ ಯಾವುದೇ ಪ್ರಯೋಜನವಿಲ್ಲ. ಪ್ರಸ್ತುತ ಲೀಟರಿಗೆ 38 ರೂ.ನಂತೆ ಮಿಲ್ಮಾ ಹಾಲು ಮಾರಾಟಮಾಡಲಾಗುತ್ತಿದ್ದು, ಕೃಷಿಕರಿಗೆ ಸರಾಸರಿ 30 ರೂ ಮಾತ್ರವೇ ಲಭಿಸುತ್ತಿದೆ.