ಕಾಶ್ಮೀರ : ಗಡಿಯಲ್ಲಿ ಉಗ್ರರಿಂದ ಹಲವಾರು ದಾಳಿತಾಣ ನಿರ್ಮಾಣ

ನವದೆಹಲಿ : ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳ ಕಮಾಂಡೋಗಳು ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ ಎರಡು ತಿಂಗಳ ಬಳಿಕ, ಇದೀಗ ಭಾರತದೊಳಗೆ ನುಸುಳುವ ಉದ್ದೇಶವಿಟ್ಟುಕೊಂಡಿರುವ ಭಯೋತ್ಪಾದಕರು ದಾಳಿತಾಣಗಳನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿವೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಇಂತಹ ಸುಮಾರು 15 ದಾಳಿತಾಣಗಳನ್ನು ಗುರುತಿಸಲಾಗಿದೆ ಎಂದಿರುವ ಆ ಮೂಲಗಳು, “ಇವುಗಳು ಗಡಿಗೆ 5-6 ಕಿಮೀ ಅಂತರದಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಬಾರಿ ಇವುಗಳು ಪಾಕಿಸ್ತಾನ ಸೇನೆಯಿಂದ ಹೆಚ್ಚು ಸುರಕ್ಷಿತವಾಗಿವೆ” ಎಂದಿವೆ. ಸೆಪ್ಟೆಂಬರಿನಲ್ಲಿ ನಡೆದ ಸರ್ಜಿಕಲ್ ದಾಳಿ ಬಳಿಕ ಪಾಕಿಸ್ತಾನ ಭದ್ರತಾ ಪಡೆಗಳು ಜನದಟ್ಟಣಿಯ ಅಂತಾರಾಷ್ಟ್ರೀಯ ಗಡಿಯಿಂದ ತಮ್ಮ ಶಿಬಿರ ಮತ್ತು ದಾಳಿತಾಣಗಳನ್ನು ಬೇರಡೆಗೆ ಸ್ಥಳಾಂತರಿಸಿವೆ.

“ಆದುದರಿಂದ ಭಾರತ ದೇಶವು ಅಫ್ಘಾನಿಸ್ತಾನದ ಮೇಲೆ ತನ್ನ ಪ್ರಭಾವ ಬೀರಲು ಯತ್ನಿಸುತ್ತಿರುವುದನ್ನು ಹತ್ತಿರದಿಂದ ಗಮನಿಸಿ  ಭಾರತದ ಪ್ರಯತ್ನಗಳನ್ನು ವಿಫಲಗೊಳಿಸಲ ಪ್ರಯತ್ನಿಸಬೇಕು” ಎಂಬುದು ಅವರ ಅಭಿಪ್ರಾಯ.

ಈ ಬೆಳೆವಣಿಗೆ ಹಿನ್ನೆಲೆಯಲ್ಲಿ ಭಾರತೀಯ ಏಜೆನ್ಸಿಗಳು ಗಡಿಯಲ್ಲಿ ಭದ್ರತಾ ಹೆಚ್ಚಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ದಿನರಾತ್ರಿ ನಿಗಾ ಇರಿಸಿವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನುಸುಳುಕೋರರ ಗಡಿಯಲ್ಲಿ ದಾಳಿ ಪ್ರಯತ್ನ ನಡೆಸುವುದಿಲ್ಲ. ಆದರೆ ಈ ಬಾರಿ ಗಡಿಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.