ಕಾಶ್ಮೀರ : ಸೈನಿಕರಿಬ್ಬರು ಮೃತ ; ಕ್ಯಾಪ್ಟನ್ಸಹಿತ ಮೂವರಿಗೆ ಗಾಯ

ಶ್ರೀನಗರ : ದಕ್ಷಿಣ ಕಾಶ್ಮೀರದ ಸೋಪಿಯನ್ ಜಿಲ್ಲೆಯಲ್ಲಿ ನಿನ್ನೆ ನಡೆದ ಭಯೋತ್ಪಾದಕರು ಮತ್ತು ಸೇನೆಯ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಜವಾನರು ಹುತಾತ್ಮರಾಗಿದ್ದು, ಕ್ಯಾಪ್ಟನೊಬ್ಬರ ಸಹಿತ ಇತರ ಮೂವರು ಗಾಯಗೊಂಡಿದ್ದಾರೆ. ಜಿಲ್ಲೆಯ ಝೈನಾಪೋರೆ ಪ್ರದೇಶದ ಅವ್ನೀರ್  ಗ್ರಾಮದಲ್ಲಿ ಭಯೋತ್ಪಾದಕರು ತಂಗಿದ್ದಾರೆಂಬ ಮಾಹಿಯನ್ವಯ ಅಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.