ಸಾಂಗವಾಗಿ ನಡೆದ ಮಿಲಾದುನ್ನೆಬಿ

ಸಾಂದರ್ಭಿಕ ಚಿತ್ರ

 ಬಗೆಹರಿದ ವಿವಾದ 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದತ್ತಾತ್ರೇಯ ಪೀಠಕ್ಕೆ ಪೂಜೆಗೆ ತೆರಳುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಇಲ್ಲಿನ ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್ ನಡುವಿನ ನಡುವೆ ಇದ್ದ ವಿವಾದ ಕೊನೆಗೂ ಸೌಹಾರ್ದಯುತವಾಗಿ ಬಗೆಹರಿದಿದೆ.

ಇದುವರೆಗೂ ಎರಡೂ ಸಂಘಟನೆಗಳ ನಡುವೆ ಇದ್ದ ವಾದ ವಿವಾದವನ್ನು ಕೊಣಾಜೆ ಠಾಣೆಯಲ್ಲಿ ಬಗೆಹರಿಸಲಾಗಿದೆ.

ದತ್ತಾತ್ರೇಯ ಪೀಠಕ್ಕೆ ಪೂಜೆಗೆ ತೆರಳುವ ಹಿನ್ನೆಲೆಯಲ್ಲಿ ಬಜರಂಗಳದ ಕಾರ್ಯಕರ್ತರು ಅಸೈಗೋಳಿಯಲ್ಲಿ ಕಂಬ ಹಾಕಿ ಕೇಸರಿ ಪತಾಕೆ, ಧ್ವಜ, ಬಂಟಿಂಗ್ಸ್ ಹಾಕಿದ್ದರು. ಈದ್ ಮಿಲಾದ್ ಹಿನ್ನೆಲೆಯಲ್ಲಿ ಖಿದ್ಮತುಲ್ ಫ್ರೆಂಡ್ಸ್ ಸಂಘಟಕರು ಈದ್ ಮಿಲಾದ್ ಕಾರ್ಯಕ್ರಮದ ಆಯೋಜಿಸಿದ್ದ ಜಾಗದಲ್ಲೇ ತಮ್ಮ ಶುಭಾಶಯಗಳ ಬ್ಯಾನರ್ ಹಾಕಿದ್ದು, ಪರಿಸರದಲ್ಲಿ ಅಶಾಂತಿಗೆ ಕಾರಣವಾಗಿತ್ತು.

ಮೊದಲೇ ಇದ್ದ ವೈಮನಸ್ಸು ಸ್ಪೋಟಗೊಂಡಿದ್ದು ಮಾತಿನ ಕಲಹಕ್ಕೆ ಕಾರಣವಾಗಿದೆ. ಕೊನೆಗೆ ಈ ಸಮಸ್ಯೆ ಕೊಣಾಜೆ ಠಾಣೆ ಮೆಟ್ಟಲೇರಿದ್ದು, ಅಲ್ಲಿ ಬಗೆಹರಿದಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಪರಿಸರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ಎಲ್ಲರ ಉಪಸ್ಥಿತಿಯಲ್ಲಿ ಸಿಹಿತಿಂಡಿ ಹಂಚಿ ಸಂಭ್ರಮಿಸಲಾಯಿತು.