ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನೆ ವಿಮಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾರತೀಯ ಸೇನೆಗೆ ಸೇರಿದ ವಿಮಾನ ಮಿಗ್ 290 ಫೈಟರ್ ವಿಮಾನವೊಂದು ಕೆಂಜಾರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಆತಂಕಕಾರಿ ಘಟನೆ ಮಂಗಳವಾರ ನಡೆದಿದೆ. ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ವಿಮಾನದ ಟಯರ್ ಸ್ಫೋಟಗೊಂಡಿದ್ದು, ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಗೋವಾದಿಂದ ಆಗಮಿಸಿದ ಈ ಮಿಗ್ ವಿಮಾನ ಪ್ರಯೋಗಾರ್ಥವಾಗಿ ಹಾರಾಟ ನಡೆಸುತ್ತಿತ್ತು ಎಂದು ತಿಳಿದುಬಂದಿದೆ. ಸುಮಾರು 4 ಗಂಟೆಗಳ ಕಾಲ ರನ್ ವೇ ಬಂದ್ ಆಗಿದ್ದು, ದೆಹಲಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನವನ್ನೂ ಕೊಚ್ಚಿಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ ಹೇಳಿದ್ದಾರೆ.