ಪೊಲೀಸ್ ಅಂಗರಕ್ಷಕನಿಂದ ಮೇಟಿ ರಾಸಲೀಲೆ ಬಯಲು’

ಬಳ್ಳಾರಿ : ಮಾಜಿ ಸಚಿವ ಎಚ್ ವೈ ಮೇಟಿ ಬಾಗಲಕೋಟೆಯ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರಾಸಲೀಲೆಯಾಡುತ್ತಿದ್ದ ಸೀಡಿಯು ಸಚಿವನ ಪೊಲೀಸ್ ಗನ್ ಮ್ಯಾನ್ ಸುಭಾಷ್ ಮುಗಲ್ಕೋಡ್ ಎಂಬವ ಮೂಲಕ ದೂರುದಾರ ಬಳ್ಳಾರಿ ಮೂಲದ ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಮುರಳಿ ಕೈಸೇರಿತ್ತು.

ಬಾಗಲಕೋಟೆಯ ಆಯರ್ವೇದ ಕಾಲೇಜಿನಲ್ಲಿ ಉದ್ಯೋಗಿಯಾಗಿರುವ ಆ ಮಹಿಳೆಯೊಂದಿಗೆ ಮೇಟಿ ಯಾವಾಗಲೂ ರಾಸಲೀಲೆಯಲ್ಲಿ ತೊಡಗಿಕೊಳ್ಳುತ್ತಿದ್ದ ಎಂದು ಅವರು ಹೇಳಿದ್ದಾರೆ.

ಬಾಗಲಕೋಟೆ ನಗರ ಪಾಲಿಕೆ ಆವರಣದಲ್ಲಿರುವ ಜಿಲ್ಲಾ ಸಚಿವರ ಚೇಂಬರಿನಲ್ಲಿ ಕಳೆದ ತಿಂಗಳು ಮೇಟಿ ಆ ಮಹಿಳೆಯೊಂದಿಗೆ ನಡೆಸುತ್ತಿದ್ದ  ಅಕ್ರಮ ಸಂಬಂಧದ ದೃಶ್ಯವನ್ನು ಸುಭಾಷ್ ಸೆರೆ ಹಿಡಿದಿದ್ದ ಎಂದು ಆ ಮೂಲಗಳು ಹೇಳಿವೆ.

ಲೈಂಗಿಕ ಕ್ರಿಯೆಯ ಟೇಪಿನಿಂದ ಸುಭಾಷ್ ಸಚಿವ ಮೇಟಿಯನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸುತ್ತಿದ್ದ. ಆದರೆ ಇದರಲ್ಲಿ ಆತ ಯಶಸ್ಸಾಗಿರಲಿಲ್ಲ. ಸುಭಾಷ್ ಮತ್ತು ಈತನ ಕುಟುಂಬವು ಸಚಿವನ ಸಮುದಾಯದವರೇ ಆಗಿದ್ದಾರೆ. ಅಲ್ಲದೆ ಸಚಿವನ ಬೆಂಬಲಿಗರು ಸುಭಾಷ್‍ನಿಗೆ ಬೆದರಿಕೆಯೊಡ್ಡಿದ್ದಲ್ಲದೆ, ಆತನಲ್ಲಿದ್ದ ಮೊಬೈಲ್ ಕಸಿದುಕೊಂಡು, ಸಚಿವ ಮೇಟಿಗೆ ಹಸ್ತಾಂತರಿಸಿದ್ದರು.

ಆದರೆ, ಆ ಹೊತ್ತಿಗಾಗಲೇ ಸುಭಾಷ್ ಸಚಿವನ ರಾಸಲೀಲೆಯ ಮತ್ತೊಂದು ಪ್ರತಿ ಮಾಡಿಟ್ಟುಕೊಂಡಿದ್ದ. ನಂತರ ಸುಭಾಷ್ ಫೇಸ್ಬುಕ್ಕಲ್ಲಿ ಆರ್ ಟಿ ಐ ಕಾರ್ಯಕರ್ತ ರಾಜಶೇಖರ್‍ನನ್ನು ಸಂಪರ್ಕಿಸಿ ಡೀಲ್ ಮಾಡಿಕೊಂಡಿದ್ದ. ಇನ್ನು ಈತ ಈ ವೀಡಿಯೋ ಪ್ರಸಾರಿಸುತ್ತಾನೆಂದು ತಿಳಿದ ಸಚಿವನ ಬೆಂಬಲಿಗರು ಡಿ 8ರಂದು ಬಳ್ಳಾರಿಯಲ್ಲಿ ರಾಜಶೇಖರನನ್ನು ತಡೆದು ಹಣ ನೀಡಲು ಮುಂದಾಗಿದ್ದಲ್ಲದೆ, ಮಾತು ಮೀತಿ ವರ್ತಿಸಿದರೆ ಪರಿಸ್ಥಿತಿ ನೆಟ್ಟಗಾಗುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು.