ಪರೇಶ ಸಾವಿನ ಪ್ರಕರಣ : 3ನೇ ಆರೋಪಿ ಬಂಧನ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ಪರೇಶ ಮೇಸ್ತಾನ ಸಾವಿನ ಪ್ರಕರಣದ ದೂರಿಗೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಪಟ್ಟಣದ ಬಂದರ ನಿವಾಸಿ ಆಸಿಫ್ ರಫಿಕನನ್ನು ಹೊನ್ನಾವರ ಪೆÇಲೀಸರು ರವಿವಾರ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಭಟ್ಕಳ ತಾಲೂಕಿನ ಶಿರಾಲಿಯ ಬಸ್ ತಂಗುದಾಣದ ಬಳಿ ನಸುಕಿನಲ್ಲಿ ನಿಂತಿರುವಾಗ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಪರೇಶ ಮೇಸ್ತಾನ ತಂದೆ ಕಮಲಾಕರ ಮೇಸ್ತಾ ಅವರು 5 ಮಂದಿಯ ವಿರುದ್ಧ ಡಿಸೆಂಬರ್ 8ರಂದು ದೂರು ನೀಡಿದ್ದರು. ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು. ಈತ 3ನೇ ಆರೋಪಿಯಾಗಿದ್ದಾನೆ. ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY