ಪರೇಶ ಮೇಸ್ತನ ಸಾವಿನ ಪ್ರಕರಣದ ಮತ್ತಿಬ್ಬರು ಸೆರೆ

ಹೊನ್ನಾವರ : ಪರೇಶ ಮೇಸ್ತನ ಸಾವಿನ ಪ್ರಕರಣದ ದೂರಿಗೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳನ್ನು ಹೊನ್ನಾವರ ಪೆÇಲೀಸರು ಗುರುವಾರ ಶಿರಸಿಯ ಬಸ್ ನಿಲ್ದಾಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪಟ್ಟಣದ ನಿವಾಸಿಗಳಾದ ಶೇಕ್ ಇಮ್ತಿಯಾಜ್ ಮತ್ತು ಸೈಯದ್ ಫೈಜಲ್ ಬಂಧಿತ ಆರೋಪಿಗಳು. ಶಿರಸಿಯ ಬಸ್ ತಂಗುದಾಣದ ಬಳಿ ಗುರುವಾರ ಬೆಳಿಗ್ಗೆ ನಿಂತಿರುವಾಗ ಪೊಲೀಸರು ಬಂಧಿಸಿದ್ದಾರೆ. ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಅವರು 5 ಮಂದಿಯ ವಿರುದ್ಧ ಡಿಸೆಂಬರ್ 8ರಂದು ದೂರು ನೀಡಿದ್ದರು. ಈ ಹಿಂದೆ ಮೂರು ಜನರನ್ನು ಬಂಧಿಸಲಾಗಿತ್ತು. ಈಗ ಇಬ್ಬರನ್ನು ಬಂಧಿಸಿದ್ದು ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.

LEAVE A REPLY