ಮೆಸ್ಕಾಂನಿಂದ ಕಾಲ್ ಸೆಂಟರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಿನದ 24 ಗಂಟೆಯೂ ಸತತವಾಗಿ ಸೇವೆ ನೀಡುವ ನಿರಂತರ ಗ್ರಾಹಕ ಸೇವೆಯ ಕಾಲ್ ಸೆಂಟರ್ ಮೆಸ್ಕಾಂ ವತಿಯಿಂದ ಆರಂಭಿಸಲಾಗುವುದು ಎಂದು ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕ ನಂಜಪ್ಪ ಹೇಳಿದ್ದಾರೆ

ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಕೇಂದ್ರವನ್ನು ಕದ್ರಿಯಲ್ಲಿ ಆರಂಭಿಸಲಾಗುವುದು. ಕೇಂದ್ರ ಆರಂಭಗೊಂಡ ಬಳಿಕ ಇಲ್ಲಿ ಗ್ರಾಹಕರ ದೂರುಗಳನ್ನು ಒಂದೇ ಕಡೆ ಸ್ವೀಕರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ದೂರುಗಳ ಬಗ್ಗೆ ಇತರ ಸಬ್ ಸ್ಟೇಶನುಗಳ ಮೂಲಕ ಪರಿಹರಿಸುವ ಕ್ರಮವನ್ನು ಕೇಂದ್ರದ ಮೂಲಕ ನಿರ್ವಹಿಸಲಾಗುವುದು. ಶೀಘ್ರದಲ್ಲೇ ಈ ಕೇಂದ್ರ ಆರಂಭವಾಗಲಿದೆ” ಎಂದರು.

2007-08ರಲ್ಲಿ ಆರ್ಥಿಕ ವ್ಯವಹಾರದಲ್ಲಿ ಶೇ 13.71 ನಷ್ಟ ಅನುಭವಿಸುತ್ತಿದ್ದ ಮೆಸ್ಕಾಂನ ನಷ್ಟದ ಪ್ರಮಾಣ ಶೇ 11.50 ಪ್ರಮಾಣಕ್ಕೆ ಇಳಿಕೆಯಾಗಿದೆ ಎಂದರು.