ಎಲ್ಲೆಡೆ ಡಿಜಿಟಲ್ ವಹಿವಾಟಿನ ಘೋಷಣೆಯೊಂದೇ ಸಾಕಾಗದು

ಮಂಗಳೂರು ಸುತ್ತಮುತ್ತಲಿನ ಅಂಗಡಿಗಳಲ್ಲಿ ಈಗ ಕ್ಯಾಶ್ ಲೆಸ್ ವ್ಯವಹಾರ ಮಾಡುವುದಕ್ಕೆ ಕಾರ್ಡ್ ಸ್ವೈಪ್ ಮಾಡಲು ಕೇಳಿಕೊಂಡರೆ ನಿರಾಕರಿಸುತ್ತಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ “ನಾವು ಬ್ಯಾಂಕಿಗೆ ಸ್ವೈಪ್ ಮೆಶಿನ್ ನೀಡುವುದಕ್ಕೆ ಅರ್ಜಿ ಹಾಕಿದ್ದೇವೆ. ಆದರೆ ಅವರು ಅದನ್ನು ಇನ್ನೂ ನೀಡಿಲ”್ಲ ಎಂದು ಹೇಳುತ್ತಿದ್ದಾರೆ. ಆದರೆ ಪೇಟಿಎಂ ಬಗ್ಗೆ ಕೇಳಿದರೆ ಅದರ ಉಸಾಬರಿ ಯಾರಿಗೆ ಬೇಕು ಎಂದು ಮಾತನ್ನು ತೇಲಿಸಿ ಬಿಡುತ್ತಾರೆ. ಒಟ್ಟಿನಲ್ಲಿ ಡಿಜಿಟಲ್ ಇಂಡಿಯಾ ಮಾಡುವ ಘೋಷಣೆ ಮಾತ್ರ ಮಾಡಿದರೆ ಸಾಕಾಗದು. ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಬೇಕು. ಕೇಂದ್ರ ಸರಕಾರದ ಬೇಡಿಕೆಗೆ ತಕ್ಕಂತೆ ಸ್ವೈಪ್ ಯಂತ್ರವನ್ನು ಕೂಡಲೇ ಪೂರೈಕೆ ಮಾಡುವಂತೆ ಬ್ಯಾಂಕುಗಳಿಗೆ ಆದೇಶಿಸಬೇಕಾಗಿದೆ.

  • ರಘು ಉರ್ವಾ, ಮಂಗಳೂರು