ಪ್ರಮುಖ ಹುದ್ದೆಗಳ ನೇಮಕಕ್ಕೆ ಸಿಗುವವರೆಲ್ಲ ಅನರ್ಹರೇ

ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಲೋಕಾಯುಕ್ತ ಹುದ್ದೆಗೆ ಆಯ್ಕೆಯಾಗುವುದನ್ನು ತಡೆಯುವುದಕ್ಕಾಗಿ ಅವರ ಮೇಲೆ ಆರೋಪದ ಸುರಿಮಳೆ ಮಾಡುತ್ತಿರುವುದು ಕಂಡುಬರುತ್ತಿದೆ. ವಿಶ್ವನಾಥ ಶೆಟ್ಟಿ ಮೇಲೆ ಆರೋಪಗಳು ಇಲ್ಲ ಎಂದು ಹೇಳುವುದಲ್ಲ. ಆದರೆ ಆ ಆರೋಪ ಸಾಬೀತಾಗಿ ಅವರಿಗೆ ಶಿಕ್ಷೆಯಾಗಿದೆಯೇ ಎಂಬುದು ಇಲ್ಲಿ ಮುಖ್ಯ ಸಂಗತಿ.
ದೇಶದ, ರಾಜ್ಯದ ಪ್ರಮುಖ ಹುದ್ದೆಗಳನ್ನು ಅಲಂಕರಿಸುವವರೆಲ್ಲರ ಮೇಲೂ ಆರೋಪ ಇರುವುದು ಕಂಡುಬರುತ್ತಿದೆ. ಆರೋಪ ಇಲ್ಲದೇ ಇದ್ದರೆ ಆ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ ಎನ್ನುವ ಹಂತದಲ್ಲಿ ಯಾವುದೋ ಹಳೆ ಪ್ರಕರಣ, ಸಣ್ಣಪುಟ್ಟ ವಿವಾದಗಳಿಗೆ ರೆಕ್ಕೆ ಪುಕ್ಕ ಹಚ್ಚಿ ವಿವಾದ ಸೃಷ್ಟಿಸಲಾಗುತ್ತದೆ. ಇದೇ ರೀತಿ ಆಗ ತೊಡಗಿದರೆ ಮುಂದಿನ ದಿನದಲ್ಲಿ ದೇಶದ ಪ್ರಮುಖ ಹುದ್ದೆಯೇ ಖಾಲಿ ಬಿದ್ದುಬಿಡಬಹುದು. ಇದರಿಂದ ಸಮಾಜ ವಿರೋಧಿಗಳಿಗೆ ಲಾಭವಾಗುತ್ತದೆಯೇ ಹೊರತು ಜನರಿಗೇನೂ ಪ್ರಯೋಜನವಾಗೋಲ್ಲ. ಇದರ ಅರ್ಥ ದೇಶ, ರಾಜ್ಯದಲ್ಲಿ ಎಲ್ಲರೂ ಭ್ರಷ್ಟರಾಗಿ ಬಿಟ್ಟಿದ್ದಾರೆ ಎಂದಾಗುವುದಿಲ್ಲವೇ ? ಇದೇ ರೀತಿ ಮುಂದುವರಿದರೆ ಕೆಲವು ಪ್ರಮುಖ ಹುದ್ದೆ ರದ್ದು ಮಾಡಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ

  • ಎಸ್ ಕೆ ಪುತ್ತೂರು