ಅವಿಸ್ಮರಣೀಯಗೊಳಿಸಿದ ಚಿತ್ರಕಲಾ ಪ್ರದರ್ಶನ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ ಚಿತ್ರಕಲಾ ಅಧ್ಯಾಪಕರೊಬ್ಬರು ಸ್ವತಃ ತಾನು ರಚಿಸಿದ ಕಲಾಕೃತಿಯೊಂದನ್ನು ಕಲೋತ್ಸವದ ಸಂಘಟಿಸಿದ ಶಾಲೆಗೆ ನೀಡುವ ಮೂಲಕ ಕಲೋತ್ಸವದ ಕಳೆಯನ್ನು ಅವಿಸ್ಮರಣೀಯವನ್ನಾಗಿಸಿದ್ದಾರೆ.

ಉಪ್ಪಳ ಸರಕಾರಿ ಶಾಲೆಯಲ್ಲಿ ಜರುಗಿದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಮಂಜೇಶ್ವರ ಎಸ್ ಎ ಟಿ ಎಚ್ ಎಸ್ ಎಸ್ ಶಾಲೆಯ ಚಿತ್ರಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದೇ ದಿನ ಸಂಜೆ ವೇಳೆಗೆ ಕಲೋತ್ಸವದ ಸಮಾರೋಪದಲ್ಲಿ ಅವರು ರಚಿಸಿದ ಮೌಲ್ಯಯುತ ಚಿತ್ರಕಲೆಯೊಂದನ್ನು ಉಪ್ಪಳ ಶಾಲಾ ಮುಖ್ಯೋಪಾಧ್ಯಾಯರಿಗೆ ಸಭೆಯಲ್ಲಿ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.

ಚಿತ್ರಕಲಾ ಪ್ರದರ್ಶನದ ರೂವಾರಿ ಮೂಲತಃ ಬೇಳ ನಿವಾಸಿಯಾದ ಜಯಪ್ರಕಾಶ್ ಶೆಟ್ಟಿ ವೃತ್ತಿ ಪ್ರವೃತ್ತಿ ಎರಡನ್ನೂ ಚಿತ್ರಕಲೆಗೆ ಸಮರ್ಪಿಸಿದವರು. ಮಂಜೇಶ್ವರ ಎಸ್ ಎ ಟಿ ಎಚ್ ಎಸ್ ಎಸ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮಕ್ಕಳೊಳಗೆ ಸುಪ್ತವಾಗಿರುವ ಚಿತ್ರ ರಚನಾ ಅಭಿರುಚಿಯನ್ನು ಸದಾ ಪೆÇ್ರೀತ್ಸಾಹಿಸಲು ವೇದಿಕೆ ಒದಗಿಸುವ ಕ್ರಿಯಾಶೀಲ ಶಿಕ್ಷಕ.

 

 

LEAVE A REPLY