ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯನ್ನು ಕಟ್ಟಿಹಾಕಿ ದರೋಡೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಕ್ರಮವಾಗಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಕೊಠಡಿಗೆ ನುಗ್ಗಿದ ಅಪರಿಚಿತ ಆಕೆಯನ್ನು ಕಟ್ಟಿಹಾಕಿ ನಗದು, ಬ್ಯಾಂಕಿನ ಎಟಿಎಂ ಕಾರ್ಡುಗಳನ್ನು ದೋಚಿಕೊಂಡು ಹೋಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

ದೇರಳಕಟ್ಟೆಯಲ್ಲಿರುವ ಕೆ ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನ ಸೌದಿ ಮೂಲದ ವಿದ್ಯಾರ್ಥಿನಿ ನಿಶಾನ ಚಾಕಂ ಎಂಬಾಕೆಯೇ ದರೋಡೆಗೆ ಒಳಗಾದ ವಿದ್ಯಾರ್ಥಿನಿ. ಕಾಲೇಜು ಸಮೀಪವಿರುವ ಹಾಸ್ಟೆಲಿನಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ.

ಬೆಳಗ್ಗಿನ ಜಾವ 4.30ರ ಸುಮಾರಿಗೆ ಬಾಗಿಲು ಬಡಿದ ಸದ್ದು ಕೇಳಿದ್ದು, ತನ್ನ ಸಹೋದ್ಯೋಗಿಗಳು ಬಾಗಿಲು ಬಡಿದಿರಬೇಕು ಎಂದು ನಿಶಾನ ಬಾಗಿಲು ತೆರೆದಿದ್ದರು. ಆದರೆ ಏಕಾಏಕಿ ಇವರ ಕೊಠಡಿಗೆ ಬಲವಂತವಾಗಿ ನುಗ್ಗಿದ ಅಪರಿಚಿತ ಆರೋಪಿ ಕಬ್ಬಿಣದ ರಾಡಿನಿಂದ ಈಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಅವರ ಬಾಯಿಗೆ ಬಟ್ಟೆ ತುರುಕಿ ಹಗ್ಗದಿಂದ ಕಟ್ಟಿ ಹಾಕಿ, 5 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.

ಹಣ ಇಲ್ಲವೆಂದಾಗ ಇನ್ನಷ್ಟು ಆಕ್ರೋಶಗೊಂಡ ಆರೋಪಿ ಆಕೆಯ ಪರ್ಸ್ ಹುಡುಕಿ ತೆಗೆದಿದ್ದು, ಅದರಲ್ಲಿದ್ದ 3000 ರೂ ನಗದು ಹಣವನ್ನು ಎಗರಿಸಿದ್ದಾನೆ. ಬಳಿಕ ಎಟಿಎಂ ಕಾರ್ಡ್ ಮತ್ತು ಅದರಲ್ಲಿದ್ದ ಪಿನ್ ನಂಬರ್ ಸಹಿತ ಬಲವಂತವಾಗಿ ಪಡೆದು ಹಣವನ್ನೂ ದೋಚಿ ಪರಾರಿಯಾಗಿದ್ದಾನೆ.

ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.