ಮೆಡಿಕಲ್ ಸ್ಟೋರ್ ಮೆನೇಜರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಗರದ ಜನರಲ್ ಆಸ್ಪತ್ರೆಗೆ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಸಪ್ಲೈ ಕೋ ಮಾವೇಲಿ ಮೆಡಿಕಲ್ ಸ್ಟೋರ್ ಮೆನೇಜರ್ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೆತ್ತೂರು ಕೊಟ್ಟಿಪ್ಪಾರ ನಿವಾಸಿ ಪಿ ಸುರೇಶಕುಮಾರ್ ನಾಯರ್ (38) ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಮೊದಲು ಕಾಸರಗೋಡು ಗ್ರಾಹಕರ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸಿದ್ದರು. ನಾಲ್ಕು ತಿಂಗಳ ಹಿಂದೆ ಇವರು ಸಪ್ಲೈ ಕೋ ದ ಮಾವೇಲಿ ಮೆಡಿಕಲ್ ಸ್ಟೋರಿಗೆ ವರ್ಗಾವಣೆಯಾಗಿದ್ದರು. ಭಾನುವಾರ ರಾತ್ರಿ ಇವರು ಮನೆಯಲ್ಲಿ ತಂಗಿದ್ದರು. ಬೆಳಿಗ್ಗೆ ಇವರು ನಾಪತ್ತೆಯಾದ ಕಾರಣ ಹುಡುಕಾಡುತ್ತಿರುವ ಮಧ್ಯೆ ಮನೆ ಸಮೀಪದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.