ಎಂಡೋಸಂತ್ರಸ್ತರಿಗೆ ವೈದ್ಯಕೀಯ ಶಿಬಿರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಬೆಳ್ಳೂರು ಗ್ರಾಮ ಪಂಚಾಯತು ಸಭಾಭವನದಲ್ಲಿ ವೈದ್ಯಕೀಯ ಶಿಬಿರ ನಡೆಯಿತು. ಪಂಚಾಯತು ವ್ಯಾಪ್ತಿಯ ಎಂಡೋಸಲ್ಫಾನ್ ಸಂತ್ರಸ್ತರು ಭಾಗವಹಿಸಿದರು.

ಇದೇ ವೇಳೆ ಶಯ್ಯಾವಸ್ಥೆಯಲ್ಲಿರುವ ಎಂಡೋಸಂತ್ರಸ್ತರನ್ನು ಚಿಕಿತ್ಸೆಗಾಗಿ ಕೊಂಡುಹೋಗಲು ಸರಕಾರ ನೀಡಿದ್ದ ಅಂಬುಲೆನ್ಸ್ ಕಳೆದ ಒಂದು ವರ್ಷದಿಂದ ಪಂಚಾಯತು ಕಚೇರಿ ಬಳಿ ತುಕ್ಕು ಹಿಡಿದು ನಾಶವಾಗುತ್ತಿದೆ. ಆ ಅಂಬುಲೆನ್ಸನ್ನು ರಸ್ತೆಗಿಳಿಸುವುದರ ಪೂರ್ವಭಾವಿಯಾಗಿ ನಡೆಸಬೇಕಾಗಿರುವ ಆರ್ಟಿಒ ತಪಾಸಣೆ ಇದುವರೆಗೂ ನಡೆಸಲಾಗಿಲ್ಲ. ಅಂಬುಲೆನ್ಸಿಗೆ ವಿಮೆ ಕೂಡ ಮಾಡಿಲ್ಲ ಎಂದು ಆರೋಪಿಸಲಾಗಿದೆ.