ರಾಜ್ಯದ 3 ಮೆಡಿಕಲ್ ಮಾನ್ಯತೆ ರದ್ದು, ಕಾರವಾರ ಕಾಲೇಜಿಗೆ ಎಚ್ಚರಿಕೆ

ಬೆಂಗಳೂರು : ಕರ್ನಾಟಕದ ಹಲವು ವೈದ್ಯಕೀಯ ಕಾಲೇಜುಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ತಂಡ ಇಲ್ಲಿ ಕೆಲವು ಕಾಲೇಜುಗಳು ನಿಯಮಗಳನ್ನು ಅಳವಡಿಸಿರುವುದು ದೃಢಪಟ್ಟಿದೆ. ಆಸ್ಪತ್ರೆಗೆ ದಾಖಲಾಗಿದ್ದು ತೆರೆದ ಹೃದಯದ ಚಿಕಿತ್ಸೆಗೆ ಒಳಗಾದ ರೋಗಿಗಳಲ್ಲಿ ಯಾವುದೇ ಶಸ್ತ್ರಚಿಕಿತ್ಸೆಯ ಗುರುತುಗಳಿಲ್ಲದಿರುವುದು, ಅಗತ್ಯವಿಲ್ಲದಿದ್ದರೂ ರೋಗಿಗಳನ್ನು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ದಾಖಲು ಮಾಡಿರುವುದು, ಮಕ್ಕಳನ್ನು ಅನಾಥಾಲಯಗಳಿಂದ ಕರೆದುಕೊಂಡು ಬಂದು ಮಕ್ಕಳ ವಾರ್ಡಿನಲ್ಲಿ ದಾಖಲು ಮಾಡಿರುವುದು ಇತ್ಯಾದಿ ಸಂಗತಿಗಳನ್ನು ಎಂಸಿಐ ಪತ್ತೆ ಹಚ್ಚಿದೆ.

ಇಂತಹ ಅಸಂಬದ್ಧ ಕ್ರಮಗಳನ್ನು ಕಂಡಿರುವ ಎಂಸಿಐ ಮೂರು ಖಾಸಗಿ ಕಾಲೇಜಿನ ಮಾನ್ಯತೆಯನ್ನು ರದ್ದು ಪಡಿಸುವ ನಿರ್ಧಾರಕ್ಕೆ ಬಂದಿದೆ. ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು, ದೇವನಹಳ್ಳಿಯ ಆಕಾಶ್ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಮತ್ತು ಕೋಲಾರದ ಸಂಭ್ರಮ್ ಮೆಡಿಕಲ್ ಕಾಲೇಜಿನ ಮಾನ್ಯತೆ ರದ್ದಾಗಲಿದೆ.

ಇವಲ್ಲದೇ ಇನ್ನೂ ಎರಡು ಸರಕಾರಿ ಕಾಲೇಜುಗಳು ಸೇರಿದಂತೆ ಮೂರು ಕಾಲೇಜುಗಳ ಮಾನ್ಯತೆಯನ್ನು ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಮತ್ತು ಇತರ ಕಾರಣಗಳಿಗಾಗಿ ರದ್ದು ಪಡಿಸಲು ನಿರ್ಧರಿಸಲಾಗಿದೆ. ಚಾಮರಾಜನಗರ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್, ಕಾರವಾರ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಮತ್ತು ಅಲ್ ಅಮೀನ್ ಕಾಲೇಜ್ ಆಫ್ ವಿಜಯಪುರದ ಖಾಸಗಿ ವೈದ್ಯಕೀಯ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆ.