ಮನಪಾದಿಂದ ಬೀದಿಬದಿ ವ್ಯಾಪಾರಸ್ಥರ ತೆರವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪೊಲೀಸರ ಉಪಸ್ಥಿತಿಯಲ್ಲಿ ಬುಧವಾರ ಮುಂಜಾನೆ ನಗರದ ಹಲವು ಕಡೆಗಳಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಗೂಡಂಗಡಿಗಳನ್ನು ತೆರವು ಮಾಡಿದರು.

ನಗರದ ಜನನಿಬಿಡ ಸ್ಥಳಗಳಾದ ಸ್ಟೇಟ್‍ಬ್ಯಾಂಕ್, ಸೆಂಟ್ರಲ್ ಮಾರುಕಟ್ಟೆ, ಲೇಡಿಗೋಶನ್ ಆಸ್ಪತ್ರೆ ಪರಿಸರದಲ್ಲಿ ತುಂಬಿಹೋಗಿದ್ದ ಅಕ್ರಮ ಗೂಡಂಗಡಿಗಳನ್ನು ಕ್ರೇನುಗಳ ಸಹಾಯದಿಂದ ತೆರವುಗೊಳಿಸಲಾಯಿತು. ಬೀದಿ ಬದಿ ವ್ಯಾಪಾರಸ್ತರನ್ನು, ತರಕಾರಿ, ಹಣ್ಣುಹಂಪಲು ವ್ಯಾಪಾರಿಗಳನ್ನೂ ತೆರವುಗೊಳಿಸಲಾಯಿತು.

ಪಾಲಿಕೆಯ ಈ ತೆರವು ಕಾರ್ಯಾಚರಣೆಯನ್ನು ಜನ ಮುಕ್ತ ಕಂಠದಿಂದ ಶ್ಲಾಘಿಸಿದರೆ, ಅತ್ತ ಪಾಲಿಕೆ ಮತ್ತು ಪೊಲೀಸರು ತಮ್ಮ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದರು. ತಮಗೆ ಈಗಾಗಲೇ ನೀಡಿದ ಜಾಗದಲ್ಲಿ ಬೀದಿ ಬದಿ ವ್ಯಾಪಾರವನ್ನು ನಿರ್ವಹಿಸಲಾಗದ ಸ್ಥಿತಿ ಇದ್ದು, ಅಲ್ಲಿಗೆ ಗ್ರಾಹಕರು ಯಾರೂ ಬರ್ತಾ ಇಲ ್ಲ ಎಂದು ಬೀದಿ ಬದಿ ವ್ಯಾಪಾರಿ ಉಸ್ಮಾನ್ ದೂರಿದರು.