ಮಂಗಳೂರು ಪಾಲಿಕೆ ಚುನಾವಣೆ ಹೊಸ ಮುಖಗಳು ಹೆಚ್ಚೆಚ್ಚು ಬರಲಿ

ಮಂಗಳೂರು ನಗರ ಪಾಲಿಕೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆಯೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೊದಲಾದ ಪಕ್ಷದಿಂದ ಸ್ಪರ್ಧಿಸಲು ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಈ ಹಿಂದೆ ಎರಡ್ಮೂರು ಬಾರಿ ಚುನಾವಣೆಗೆ ನಿಂತು ಗೆದ್ದವರು ಮತ್ತೆ ಸ್ಪರ್ಧೆಗೆ ನಿಲ್ಲದೇ ಯುವಕರಿಗೆ ಅವಕಾಶ ಮಾಡಿ ಕೊಡಬೇಕು ಈಗೀಗ ಪಾಲಿಕೆಯಲ್ಲಿ ಗೆದ್ದು ಹೋದ ಎಲ್ಲಾ ಪಕ್ಷದ ಕಾರ್ಪೊರೇಟರುಗಳು ಜನರ ಕೈಗೆ ಸಿಗುವುದೇ ಇಲ್ಲ ರಸ್ತೆ ದಾರಿ ದೀಪದ ಸಮಸ್ಯೆಗೆ ಬಗ್ಗೆ ಹೇಳಿದರೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿದರೆ ಸಿಟ್ಟು ಬರುತ್ತದೆ ಯಾವಾಗ ನೋಡಿದರೂ ಬ್ಯೂಸಿ ಬ್ಯೂಸಿ ಎಂದು ಹೇಳುತ್ತಾರೆ ಕೆಲ ಕಾರ್ಪೊರೇಟರುಗಳು ದಂಡಕ್ಕೆ ಮಾತ್ರ ಇದ್ದಾರೆಯೇ ಎಂದು ಗೋಚರವಾಗುತ್ತದೆ ತಮ್ಮ ಏರಿಯಾದ ರಸ್ತೆ ಬದಿಗಳಲ್ಲಿನ ಕಳೆ ತೆಗೆಯುಲು ಮುರ್ನಾಲ್ಕು ಬಾರಿ ಹೇಳಬೇಕು ರಸ್ತೆಗಳು ಎಕ್ಕುಟ್ಟಿ ಹೋದರೂ ಅದನ್ನು ಸರಿಪಡಿಸುವುದಿಲ್ಲ ದಾರಿ ದೀಪ ಕೆಟ್ಟು ಹೋದರೆ ತಿಂಗಳುಗಟ್ಟಲೆ ಸರಿ ಮಾಡುವುದಿಲ್ಲ ಆದ್ದರಿಂದ ತುಂಬಾ ಅಲಸ್ಯ ಇರುವ ಕಾರ್ಪೊರೇಟರುಗಳು ಮುಂದೆ ಚುನಾವಣೆಗೆ ನಿಲ್ಲದೇ ಉತ್ಸಾಹದಿಂದ ಜನರ ಕೆಲಸ ಮಾಡಲು ಮನಸ್ಸು ಇರುವವರು ಮಾತ್ರ ವಿವಿಧ ಪಕ್ಷಗಳಿಂದ ಸ್ಪರ್ಧೆಗೆ ನಿಲ್ಲಲಿ ಕೆಲವು ಕಾರ್ಪೊರೇಟರುಗಳು ತಮಗೆ ಸಂಬಂಧಿಸಿದವರಿಗೆ ಪಾಲಿಕೆಗೆ ಗುತ್ತಿಗೆ ಕೆಲಸ ಕೊಡಿಸುವುದರಲ್ಲಿಯೇ ಸಮಯ ಹಾಳು ಮಾಡುತ್ತಾರೆ ತಮ್ಮ ಏರಿಯಾದ ಕೆಲಸ ಮಾಡಲು ಸಮಯವಿಲ್ಲ ಆದ್ದರಿಂದ ಮತ್ತೆ ಮತ್ತೆ ಇಂಥ ಜಡ ಇರುವವರಿಗೆ ಮತ್ತೆ ಟಿಕೆಟ್ ನೀಡದೇ ಜನರ ನಡುವೆ ಕಷ್ಟ ಸುಖಗಳಿಗೆ ಸ್ಪಂದಿಸುವ ರಾಜಕೀಯ ಅನುಭವದ ಜತೆಗೆ ಕೆಲಸ ಮಾಡುವ ಅನುದಾನ ತರುವ ಚಾಕಚಕ್ಯತೆ ಇರುವವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿ

  • ಕಿರಣ್ ಕುಮಾರ್  ಬೋಳೂರು