ಮಯೂರಿ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ !

ಅಶ್ವಿನಿ ನಕ್ಷತ್ರ’ ಟೀವಿ ಧಾರಾವಾಹಿ ಮೂಲಕ ಮನೆಮಾತಾದ ಮಯೂರಿಯನ್ನು ನಿಜಾರ್ಥದಲ್ಲಿ `ಆಟಕ್ಕುಂಟು ಲೆಕ್ಕಕ್ಕಿಲ್ಲ’ ಅಂತಂದುಕೊಳ್ಳಬೇಡಿ. `ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವುದು ಮಯೂರಿಯ ಮುಂದಿನ ಚಿತ್ರದ ಹೆಸರು. ಮಯೂರಿ ಈಗಾಗಲೇ `ಕೃಷ್ಣ ಲೀಲಾ’, `ಇಷ್ಟ ಕಾಮ್ಯ’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದು ಆಕೆ ಈಗ ನಟಿಸುತ್ತಿರುವ `ಕರಿಯ 2′ ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಇದರ ಜೊತೆಗೇ ಮಯೂರಿ `ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಹೊಸ ಚಿತ್ರದಲ್ಲಿಯೂ ನಟಿಸುತ್ತಿದ್ದಾಳೆ. ಚಿತ್ರೀಕರಣದ ಸಮಯದಲ್ಲಿ ಮಯೂರಿ ಸೀರೆ ಉಟ್ಟು ಕರಿಮಣಿ ಧರಿಸಿದ್ದು ನೋಡಿದರೆ ಆಕೆ ಚಿತ್ರದಲ್ಲಿ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.

ಕೆಲದಿನಗಳ ಹಿಂದಷ್ಟೇ ಮಯೂರಿ ಇಂಗ್ಲೀಷ್ ವೀಡಿಯೋ ಆಲ್ಬಂ `ಗರ್ಲ್ ಇಸ್ ನಾಟ್ ಅ ಸಿನ್’ನಲ್ಲಿ ನಟಿಸಿದ್ದು ಅದರಲ್ಲಿ ಆಕೆ ತುಂಡು ಲಂಗದಲ್ಲಿ ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಳು.