ಮಾವ, ಅತ್ತೆಗೆ ಮಾರಾಣಾಂತಿಕ ಹಲ್ಲೆಗೈದ ಸೊಸೆ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಾವ ಮತ್ತು ಅತ್ತೆಗೆ ಮಾರಾಣಾಂತಿಕ ಹಲ್ಲೆಗೈದ  ಆರೋಪದಲ್ಲಿ ಸೊಸೆ ವಿರುದ್ಧ ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮಲ್ಪೆ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಸಮೀಪದ ಕೆಳಾರ್ಕಳಬೆಟ್ಟು ಗ್ರಾಮದ ಲಕ್ಷ್ಮೀನಗರ 10ನೇ ಕ್ರಾಸ್ ನಿವಾಸಿ ಲಕ್ಷ್ಮಣ ಪೈ ಎಂಬವರ ಪತ್ನಿ ಅಶ್ವಿನಿ ಪೈ ಆರೋಪಿತೆ. ತಂದೆ ಕೆ ವೆಂಕಟೇಶ ಪೈ (68) ಮತ್ತು ತಾಯಿ ವೀಣಾ ಪೈ ಲಕ್ಷ್ಮೀನಗರದಲ್ಲಿ ವಾಸವಾಗಿದ್ದ ಮನೆಗೆ ಮಗ ಲಕ್ಷ್ಮಣ ತನ್ನ ಹೆಂಡತಿ ಅಶ್ವಿನಿಯನ್ನು ವಾರದ ಹಿಂದೆ ಕರೆದುಕೊಂಡು ಬಂದಿದ್ದ. ಕಳೆದ ಭಾನುವಾರ ಮಧ್ಯಾಹ್ನ ಮನೆಯಲ್ಲಿ ಗಂಡ ಇಲ್ಲದ ವೇಳೆ ಆರೋಪಿತೆ ಅಶ್ವಿನಿಯು ಮಾವ ವೆಂಕಟೇಶ ಮತ್ತು ಅತ್ತೆ ವೀಣಾಗೆ ಅವಾಚ್ಯವಾಗಿ ಬೈದು ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ದೂರಲಾಗಿದೆ. ಈ ಬಗ್ಗೆ ವೆಂಕಟೇಶ ಪೈ ನೀಡಿದ ದೂರಿನಂತೆ ಅಶ್ವಿನಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.