ವಿದ್ಯಾರ್ಥಿಗಳ ಹಸ್ತಮೈಥುನದಿಂದ ಡ್ರೈನೇಜ್ ಸಮಸ್ಯೆ !

ಮಣಿಪಾಲ ವಾರ್ಸಿಟಿ ಬಾನಗಡಿ

ಮಣಿಪಾಲ : ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಪ್ರತಿಷ್ಠಿತ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ವಿಲಕ್ಷಣ ಪ್ರಸಂಗವೊಂದು ನಡೆದಿದೆ. ವಿಶ್ವವಿದ್ಯಾಲಯದ ಒಂದು ಹಾಸ್ಟೆಲ್ಲಿನಲ್ಲಿ ತಲೆದೋರಿದೆಯೆನ್ನಲಾದ ವಿಚಿತ್ರ ಪರಿಸ್ಥಿತಿಯಿಂದ ಸಂಸ್ಥೆ  ನೊಟೀಸ್ ಜಾರಿಗೊಳಿಸಿದೆ. ಆ ನೊಟೀಸ್ ಓದಿದರೆ ಎಂಥವರಿಗೂ ಆಶ್ಚರ್ಯ ಹುಟ್ಟಿಸದೇ ಇರಬಹುದು, ಹಲವರು ಮುಸಿಮುಸಿ ನಗಬಹುದು. ಅದರಲ್ಲಿ ಹೀಗೆಂದು ಬರೆಯಲಾಗಿದೆ :

“ಸ್ನಾನಗೃಹಗಳಲ್ಲಿ ವಿದ್ಯಾರ್ಥಿಗಳು ಹಸ್ತಮೈಥುನ  ನಡೆಸುವುದು ಮಣಿಪಾಲ ಸರ್ವಿಸ್ ಕಾರ್ಪ್ ಫೆಸಿಲಿಟಿ ಮ್ಯಾನೇಜ್ಮೆಂಟ್ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಸ್ನಾನಗೃಹಗಳ ಒಳಚರಂಡಿ ವ್ಯವಸ್ಥೆಯು ವೀರ್ಯವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿಲ್ಲ ! ಡ್ರೈನೇಜಿನಲ್ಲಿರುವ ಅತ್ಯಧಿಕ ಪ್ರಮಾಣದ ವೀರ್ಯದಿಂದಾಗಿ ನಿರ್ವಹಣಾ ವೆಚ್ಚ ಸಾವಿರಾರು ರೂಪಾಯಿಗಳಾಗುತ್ತಿದ್ದು ಮುಂದಿನ ವರ್ಷದ ಹಾಸ್ಟೆಲ್ ವೆಚ್ಚಗಳಲ್ಲಿ ಕಾಣಿಸಲಾಗುವುದು. ಅದು ನಿಮ್ಮ ಹಣ. ದಯವಿಟ್ಟು ನಿಮ್ಮ  ಕೋಣೆಗಳಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವಾರ್ಡನ್ ಅವರನ್ನು ಸಂಪರ್ಕಿಸಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು.” ಕೆಳಗೆ ಮುಖ್ಯ ವಾರ್ಡನ್, ಎಂಐಟಿ, ಮಣಿಪಾಲ ಅವರ ಹೆಸರು ನೀಡಲಾಗಿದೆ.

ಈ ನೊಟೀಸ್ ಜಾರಿಯಾದಂದಿನಿಂದ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಅದು ದೊಡ್ಡ ಚರ್ಚೆಯ ವಿಷಯವಾಗಿದ್ದು ಇಂತಹ ಒಂದು ನೊಟೀಸನ್ನು ಪ್ರಾಯಶಃ ಯಾವ ಶೈಕ್ಷಣಿಕ ಸಂಸ್ಥೆಯೂ ಹೊರಡಿಸಿರಲಕ್ಕಿಲ್ಲವೆಂಬುದು ವಿದ್ಯಾರ್ಥಿಗಳ ಅಭಿಪ್ರಾಯ.